ಬೀದರ್: ನಗರದ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ (ಜಿಎನ್ಡಿಇಸಿ) ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗವು ಸಿಲಿಕಾನ್ ಅಸೋಸಿಯೇಶನ್ ವಿದ್ಯಾರ್ಥಿಗಳ ಸಂಘದಿಂದ ಇತ್ತೀಚೆಗೆ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಹಮ್ಮಿಕೊಂಡಿತ್ತು.

ಉಪ ಪ್ರಾಂಶುಪಾಲ ಧನಂಜಯ್ ಎಂ. ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ, ಸೃಜನಶೀಲತೆ, ತಂಡದ ಕೆಲಸ ಮತ್ತು ನಾಯಕತ್ವದ ಗುಣಗಳನ್ನು ಪೋಷಿಸುವಲ್ಲಿ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಸಹಕಾರಿಯಾಗುತ್ತದೆ. ಕಳೆದ 15 ವರ್ಷಗಳಲ್ಲಿ ಇ-ಬಝ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಇದು ಸಂಸ್ಥೆಯ ಪ್ರತಿಷ್ಠಿತ ವಾರ್ಷಿಕ ಕಾರ್ಯಕ್ರಮ ಎಂದರು.

ಆಡಳಿತ ಮಂಡಳಿ ನಿರ್ದೇಶಕ ನಿವೃತ್ತ ಕರ್ನಲ್ ಆರ್. ಡಿ. ಸಿಂಗ್ ಮಾತನಾಡಿ, ಕಲಿಕೆಯನ್ನು ಪ್ರಾಯೋಗಿಕ ಮಾನ್ಯತೆ ಮತ್ತು ವ್ಯಕ್ತಿತ್ವ ಅಭಿವೃದ್ಧಿಯೊಂದಿಗೆ ಆಗಬೇಕು. ಆಗ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲು ಮತ್ತು ಉತ್ಸವದ ಮೂಲಕ ಒದಗಿಸಲಾದ ಅವಕಾಶಗಳನ್ನು ಉತ್ತಮವಾಗಿ ಬಳಸಿ ಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಇಸಿಇ ವಿಭಾಗದ ಮುಖ್ಯಸ್ಥ ಕಿಶನ್ ಸಿಂಗ್, ಸಿಲಿಕಾನ್ ಅಸೋಸಿಯೇಶನ್ ಸಂಚಾಲಕ ಪ್ರದೀಪ್ ಕರಂಜೆ, ಉಪಾಧ್ಯಕ್ಷ ಪ್ರಸಾದ್ ಪಾಟೀಲ್, ದೇವಿಕಾ, ಅಶ್ವಿನಿ, ಶ್ರೀಕಾಂತ್ ಉಪಸ್ಥಿತರಿದ್ದರು.

ಎರಡು ದಿನಗಳ ಉತ್ಸವದ ಅವಧಿಯಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆ, ಸಾಂಸ್ಕೃತಿಕ ಚಟುವಟಿಕೆಗಳು, ಒಳಾಂಗಣ ಮತ್ತು ಹೊರಾಂಗಣ ಆಟ, ಸಂವಾದಗಳು ಜರುಗಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-33-1634456729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.