ಬೀದರ್: ಭಾರತೀಯ ಕುಟುಂಬ ಯೋಜನಾ ಸಂಘದಿಂದ (ಎಫ್ಪಿಎಐ) ಇಲ್ಲಿನ ಶಿವನಗರ ದಿ ಮಿಲೇನಿಯಂ ಗ್ರುಪ್ ಆಫ್ ಇನ್ಸ್ಟಿಟ್ಯೂಷನ್ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ಶುಶ್ರೂಷಕಿಯರು ಆರೋಗ್ಯ ಸಂಸ್ಥೆಯ ಬೆನ್ನೆಲುಬು. ಅವರ ಸೇವೆ ಅಪಾರ. ಸಮಾಜದ ಆರೋಗ್ಯಕ್ಕಾಗಿ ಹಗಲಿರುಳು ಶ್ರಮಿಸುವ ಎಲ್ಲ ದಾದಿಯರಿಗೆ ಕೊಡುಗೆ ಅನನ್ಯ ಎಂದರು.

ಎಫ್ಪಿಎಐ ಕೇಂದ್ರ ಕಚೇರಿ ಮಾಜಿ ಖಜಾಂಚಿ ಡಾ. ಆರತಿ ರಘು ಮಾತನಾಡಿ, ಶುಶ್ರೂಷಕಿಯರ ಸೇವೆ ಆರೋಗ್ಯ ಕ್ಷೇತ್ರದಲ್ಲಿ ಬಹು ಮಹತ್ವದಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ/ಮುಂಜಾಗ್ರತೆ ವಹಿಸದೆ ಇರುವುದರಿಂದ ನಾನಾ ತರಹದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಬಲಿಯಾಗುತ್ತಿದ್ದಾರೆ. ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಫ್ಪಿಎಐ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ‘ಲೇಡಿ ವಿತ್ ದ ಲ್ಯಾಂಪ್’ ಎಂದೇ ಖ್ಯಾತ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಅಂಗವಾಗಿ ಅಂತರರಾಷ್ಟ್ರೀಯ ಶುಶ್ರೂಷಕಿಯರ ದಿನ ಆಚರಿಸಲಾಗುತ್ತದೆ. ನರ್ಸ್ಗಳು ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲ. ಅವರು ರೋಗಿಗಳೊಂದಿಗೆ ಸಹಾನೂಭೂತಿಯಿಂದ ವರ್ತಿಸಿ, ಧೈರ್ಯ ತುಂಬಿ, ಗುಣಮುಖರಾಗಲು ಪ್ರೇರಣೆ ನೀಡುತ್ತಾರೆ. ಅಂಥ ಒಳ್ಳೆಯ ಆರೋಗ್ಯ ಸೇವೆ ನೀಡುವುದಕ್ಕಾಗಿ ಈ ನರ್ಸಿಂಗ್ ಕೋರ್ಸ ಆಯ್ಕೆ ಮಾಡಿಕೊಂಡಿರುವುದು ತುಂಬಾ ಒಳ್ಳೆಯ ಆಯ್ಕೆ ಎಂದು ಹೇಳಿದರು.

ದಿ ಮಿಲೇನಿಯಂ ಗ್ರುಪ್ ಆಫ್ ಇನ್ಸ್ಟಿಟ್ಯೂಶನ್ಮ ಡಾ. ವೃಷಾಲಿ ಕುಲಕರ್ಣಿ, ಉಪ ಪ್ರಾಚಾರ್ಯೆ ಸಂಧ್ಯರಾಣಿ ಹಾಜರಿದ್ದರು. ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಶಾಂತಮ್ಮ ನಿರೂಪಿಸಿದರೆ, ವಿಜಯ ಲಕ್ಷ್ಮೀ ಹುಡಗೆ ವಂದಿಸಿದರು. ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-33-1452588719

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.