ಭಾಲ್ಕಿ: ‘ದೇಶದ ಉನ್ನತಿಗಾಗಿ ರೈತರು ಸೇರಿದಂತೆ ಶ್ರಮಿಕರನ್ನು ಎಲ್ಲರೂ ಗೌರವಿಸಬೇಕು’ ಎಂದು ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠ್ಠಲದಾಸ್ ಪ್ಯಾಗೆ ಹೇಳಿದರು.

ತಾಲ್ಲೂಕಿನ ರುದನೂರದಲ್ಲಿ ಮಂಗಳವಾರ ನಡೆದ ನೌಬಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ದೇಶದ ಪ್ರಗತಿಯಲ್ಲಿ ಶ್ರಮಿಕರ ಪಾತ್ರ ಬಹಳ ಮಹತ್ವದ್ದಾಗಿದೆ. ಆದರೆ, ಪ್ರಸ್ತುತ ಶ್ರೀಮಂತರು, ಪಟ್ಟಭದ್ರರು, ಅಧರ್ಮೀಯರನ್ನು ಮಾತ್ರ ಗೌರವಿಸುತ್ತಿರುವುದು ಕಳವಳಕಾರಿ’ ಎಂದು ತಿಳಿಸಿದರು.

ಪ್ರಾಚಾರ್ಯ ಶಂಕರ ಗಣಗೊಂಡ, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಸುಚಿತಾನಂದ ಕೆ. ಮಲ್ಕಾಪುರೆ, ಕನ್ನಡ ವಿಭಾಗದ ಮುಖ್ಯಸ್ಥ ರಾಜಕುಮಾರ, ದೇವದಾಸ್ ಯಲೀಶ್ ಮಾತನಾಡಿದರು.

ಶಿವಕುಮಾರ ಚಿಲ್ಲರ್ಗೆ, ಶೀಲಾ ಬಿರಾದಾರ, ಬಾಲಸುಬ್ರಹ್ಮಣ್ಯಂ, ಚನ್ನಕೇಶವ ಮೂರ್ತಿ, ಸುನೀಲಕುಮಾರ ಉಪಸ್ಥಿತರಿದ್ದರು. ಕೀರ್ತನ್ ನಿರೂಪಿಸಿದರು. ಪ್ರೊ. ಸುಮನ್ಬಾಯಿ ಸಿಂಧೆ ವಂದಿಸಿದರು. ಬೀದರ್ ವಿಶ್ವವಿದ್ಯಾಲಯ, ನೌಬಾದ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-33-247718466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.