ಗೋರನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚಿಗೆ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಅಧ್ಯಯನಗಳ ಪ್ರಚಲಿತ ಪ್ರವೃತ್ತಿಗಳ ಕುರಿತು ಎರಡನೇ ರಾಷ್ಟ್ರೀಯ ಸಮ್ಮೇಳನ ಶನಿವಾರ ನಡೆಯಿತು.

ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ವಿ.ಡಿ.ಮೈತ್ರಿ ಮಾತನಾಡಿ, ‘ತಂತ್ರಜ್ಞಾನ ಹಾಗೂ ನಿರ್ವಹಣಾ ಅಧ್ಯಯನ ಒಂದಕ್ಕೊಂದು ಅವಲಂಬಿತವಾಗಿವೆ. ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ, ಎಂಎಲ್, ಐಒಟಿ, ಡೇಟಾ ಅನಾಲಿಟಿಕ್ಸ್, ಕ್ವಾಂಟಮ್ ಕಂಪ್ಯೂಟಿಂಗ್ ಕುರಿತು ಅಧ್ಯಯನ ನಡೆಸಬೇಕು’ ಎಂದರು.

ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಎಸ್.ಎಚ್.ಹೊನ್ನಳ್ಳಿ ಮಾತನಾಡಿ, ‘ಸುಸ್ಥಿರ ಇಂಧನ ಅಭಿವೃದ್ಧಿ, ಸುಸ್ಥಿರ ವ್ಯವಹಾರ ಅಭಿವೃದ್ಧಿ, ಜನರ ನಿರ್ವಹಣೆ ಬಗ್ಗೆ ಹೆಚ್ಚು ಅಧ್ಯಯನಗಳು ಆಗಬೇಕಿದೆ’ ಎಂದರು.

ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜು ನಿರ್ದೇಶಕಿ ಉಮಾ ದೇಶಮುಖ ಮಾತನಾಡಿ, ‘ಸಮ್ಮೇಳನ ಹಲವು ತಾಂತ್ರಿಕ ಹಾಗೂ ನಿರ್ವಹಣಾ ಅಧ್ಯಯನಗಳಿಗೆ ಸಹಕಾರಿಯಾಗಲಿದೆ. ಕಾಲೇಜು ಇನ್ನೂ ಹೆಚ್ಚಿನ ಅಧ್ಯಯನಗಳಿಗೆ ಶ್ರಮಿಸಲಿದೆ’ ಎಂದರು.

ಪ್ರಾಚಾರ್ಯೆ ವಿನಿತಾ ಪಾಟೀಲ, ಜಿಎನ್ಐಟಿ ಕಾಲೇಜಿನ ಡೀನ್ ಶತ್ರುಘ್ನ ಪ್ರಸಾದ್ ಯಾದವ್, ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಜಸ್ಮಿನೀತ್ ಕೌರ್ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಸಂಶೋಧನಾ ಪ್ರಬಂಧಗಳ ಪುಸ್ತಕ ಬಿಡುಗಡೆ ಮಾಡಲಾಯಿತು.

ಶರಣಬಸವೇಶ್ವರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸತೀಶ್ ಪ್ರತಾಪುರ ಇದ್ದರು. ಸಾಗರಕುಮಾರ ಬುಯ್ಯ ನಿರೂಪಿಸಿದರು. ಬಸವಲಿಂಗ ಸ್ವಾಮಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-33-959069448

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.