ಬೀದರ್: ಕಳೆದ ಎರಡು ತಿಂಗಳಿಂದ ಬಾಗಿಲು ಮುಚ್ಚಿದ ಶಾಲೆಗಳು ಸೋಮವಾರ ತೆರೆದವು. ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದ ಶಾಲೆಗೆ ಮಕ್ಕಳು ಬರುತ್ತಿದ್ದಂತೆ ಅವರ ಮೇಲೆ ಹೂ ಸುರಿದು ಶಿಕ್ಷಕರು, ಅಲ್ಲಿನ ಸಿಬ್ಬಂದಿ ಬರಮಾಡಿಕೊಂಡರು.

ಬಳಿಕ ಮಕ್ಕಳಿಗೆ ಗುಲಾಬಿ ಹೂ ಹಾಗೂ ಬಿಸ್ಕತ್, ಚಾಕೊಲೇಟ್ ನೀಡಿ ಹೊಸ ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಕೋರಿದರು. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಶಾಲಾ ಆರಂಭೋತ್ಸವದ ಸಂಭ್ರಮ ಮನೆ ಮಾಡಿತು.

ನಗರದ ಓಲ್ಡ್ ಸಿಟಿಯ ಚಿತ್ತಾಖಾನಾ ಸರ್ಕಾರಿ ಬಾಲಕ ಮತ್ತು ಬಾಲಕಿಯರ ಕನ್ನಡ ಮತ್ತು ಉರ್ದು ಮಾಧ್ಯಮದಲ್ಲೂ ಶಾಲಾ ಆರಂಭೋತ್ಸವ ಸಂಭ್ರಮದಿಂದ ಜರುಗಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಮದರ್ ಖಾನ್ ಪಠಾಣ ಕಾರ್ಯಕ್ರಮ ಉದ್ಘಾಟಿಸಿದರು. ಬೀದರ್ ಮಹಾನಗರ ಪಾಲಿಕೆಯ ಸದಸ್ಯರಾದ ಮುಹಮ್ಮದ್ ಗೌಸ್, ಅಬ್ದುಲ್ ಅಜೀಜ್ ಮುನ್ನಾ, ಡಯಟ್ ಪ್ರಾಚಾರ್ಯ ಮುಹಮ್ಮದ್ ಗುಲ್ಶನ್, ಎಪಿಸಿಎಸ್ಎಸ್ಎ ಸಂಗ್ರಾಮಪ್ಪ ಖಂಡಾಳೆ, ಡಿವೈಪಿಸಿ ಶಿವಾಜಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಾಕಿರ್ ಹುಸೇನ್, ಡಯಟ್ ಉಪನ್ಯಾಸಕ ಸಂತೋಷ ಮಹಾರಾಜ, ಇಸಿಒ ಸಂಜುಕುಮಾರ ಮೇಟಿ, ಹೈದರ್ ಅಲಿ, ಉಪ ಪ್ರಾಂಶುಪಾಲರಾದ ಜಗದೇವಿ ಭೋಸ್ಲೆ, ಹುಡಗೆ ಗುಂಡಪ್ಪ ಉಪಸ್ಥಿತರಿದ್ದರು.

‘ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಿಸಿ’

ಭಾಲ್ಕಿ: ತಾಲ್ಲೂಕಿನ ದಾಡಗಿ, ಭಾತಂಬ್ರಾ ಸೇರಿದಂತೆ ಇತರೆಡೆಯ ಸರ್ಕಾರಿ ಶಾಲೆಗಳಲ್ಲಿ ಸೋಮವಾರ ಶಾಲಾ ಆರಂಭೋತ್ಸವ ನಡೆಯಿತು.

ದಾಡಗಿ ಶಾಲೆಯ ಹಿರಿಯ ವಿದ್ಯಾರ್ಥಿಗಳು ಡ್ರಮ್ ಬಾರಿಸಿ ಕಿರಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಶಿಕ್ಷಕರು ಮಕ್ಕಳ ಮೇಲೆ ಪುಷ್ಪ ಸುರಿದು, ಸಿಹಿ ನೀಡಿ ತರಗತಿಗೆ ಬರಮಾಡಿಕೊಂಡರು.

ಪ್ರೌಢ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಅರವಿಂದ ಎಖ್ಖೇಳೆ ಅವರು ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಷೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಪ್ರವೇಶ ಕಲ್ಪಿಸಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಪ್ರಯತ್ನಿಸಬೇಕು ಎಂದರು.

ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದಿಲೀಪ ತಮಾಸಂಗೆ, ಪ್ರೌಢ ಶಾಲೆಯ ಪ್ರಭಾರಿ ಮುಖ್ಯಗುರು ದೇವದಾಸ್, ಹಿರಿಯ ಶಿಕ್ಷಕರಾದ ಸತೀಶ ಸಿದ್ದೇಶ್ವರೆ, ರಾಮದಾಸ್ ವಾಂಜ್ರೆ, ಸಂತೋಷ ವಾಡೆ, ಜಯಂತಿ ಎಚ್, ರೇಖಾ, ಅರುಣಾ ಘಂಟೆ, ಪ್ರಭಾವತಿ ಸೇರಿದಂತೆ ಹಲವರು ಇದ್ದರು.

ಭಾತಂಬ್ರಾ: ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಶಾಲೆಗೆ ಆಗಮಿಸಿದ ಮಕ್ಕಳ ಮೇಲೆ ಹೂಮಳೆ ಸುರಿಸಿ ಸ್ವಾಗತ ಕೋರಲಾಯಿತು.

ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಪ್ರತಿಯೊಬ್ಬ ಮಗುವೂ ಶಾಲೆಗೆ ಸೇರ್ಪಡೆಯಾಗಿ ಗುಣಮಟ್ಟದ ಶಿಕ್ಷಣ ಪಡೆಯುವಂತೆ ಪಾಲಕರು ಸಹಕರಿಸಬೇಕು ಎಂದು ಕರೆ ನೀಡಿದರು.

ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಕನ್ನಾಳೆ ಮಾತನಾಡಿ, ದಾಖಲಾತಿ ಆಂದೋಲನದ ಉದ್ದೇಶ ಹಾಗೂ ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಬಳಿಕ ಶಾಲಾ ಪ್ರಾರಂಭೋತ್ಸವ, ಶಾಲಾ ದಾಖಲಾತಿ ಆಂದೋಲನ, ಪಾಲಕರ-ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮಗಳು ನಡೆದವು.

ಎಸ್ಡಿಎಂಸಿ ಅಧ್ಯಕ್ಷರಾದ ಜೈಪಾಲ ಜಾಧವ್ ಫಯಾಜುದ್ದೀನ್, ಮುಖ್ಯಶಿಕ್ಷಕರಾದ ಉಮಾಕಾಂತ ಕಳಸೆ, ದಾವೂದ್ ಜಮಾದಾರ್, ಜಿಲ್ಲಾ ಎಸ್ಟಿ ನೌಕರರ ಸಂಘದ ಅಧ್ಯಕ್ಷ ನಿರಂಜಪ್ಪ ಪಾತ್ರೆ, ರಾಜಕುಮಾರ ಪಾಲಾಪೂರೆ, ರವಿಚಂದ್ರ ಮೈನಾಳೆ, ವಿಜಯಲಕ್ಷ್ಮಿ ಮಾನಕರ್, ಎಸ್ಡಿಎಂಸಿ ಉಪಾಧ್ಯಕ್ಷೆ ಪಂಕಜಾ ಪ್ರಭುಲಿಂಗ ಸ್ವಾಮಿ, ರಮೇಶ ಬಿರಾದಾರ, ಸದಸ್ಯರಾದ ಫರ್ಜನಾ ಬೇಗಂ, ಲತಾ ಯಶವಂತ್, ಜ್ಯೋತಿ ಬಿರಾದಾರ, ವಜಿರಾಬೇಗಂ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-33-1345419367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.