ಬೀದರ್: ಶಾಹೀನ್ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ಸಂಸ್ಥೆಯ ಕಾಲೇಜಿನಲ್ಲಿ 18ರಿಂದ 25 ವರ್ಷದ ಯುವತಿಯರಿಗೆ ‘ಎಐ ಶೀ ಸಮಿತ್’ ಶನಿವಾರ ಆಯೋಜಿಸಲಾಗಿತ್ತು.

ಕೃತಕ ಬುದ್ಧಿಮತ್ತೆ, ಸೈಬರ್ ಕ್ರೈಮ್ ಜಾಗೃತಿ, ಡಿಜಿಟಲ್ ಸುರಕ್ಷತೆ, ಮಹಿಳಾ ರಕ್ಷಣೆ, ಎಐ ರಸಪ್ರಶ್ನೆ, ಎಐ ವಿಡಿಯೊ ನಿರ್ಮಾಣದ ಕುರಿತು ತರಬೇತಿ ನೀಡಲಾಯಿತು.

ಎಐ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಲ್ಕಿ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ವರ್ಷಾ ಶೆಕೋಬಾ ಮತ್ತು ಭಾಗ್ಯಶ್ರೀ ಭುರೆ ಪ್ರಥಮ ಬಹುಮಾನ ಪಡೆದರು. ಕರ್ನಾಟಕ ಪದವಿ ಕಾಲೇಜಿನ ಅನಿಜಲ್ ಮತ್ತು ವರ್ಷಿಣಿ ದ್ವಿತೀಯ ಬಹುಮಾನ ಹಾಗೂ ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲಜೀನಾ ಬೇಗಂ ಮತ್ತು ಸೈದಾ ಫಾತಿಮಾ ತೃತೀಯ ಬಹುಮಾನ ಗಳಿಸಿದರು.

ಎಐ ವಿಡಿಯೊ ಮೇಕಿಂಗ್ ಸ್ಪರ್ಧೆಯಲ್ಲಿ ಗುರುನಾನಕ್ ಎಂಜಿನಿಯರಿಂಗ್ ಕಾಲೇಜಿನ ಮದಿಹಾ ಫಾತಿಮಾ ಮತ್ತು ಯಮುನಾ ಪ್ರಥಮ, ಗುರುನಾನಕ್ ಪ್ರಥಮ ದರ್ಜೆ ಕಾಲೇಜಿನ ಸಂಜನಾ ಜೋಶಿ ಮತ್ತು ಚಂದ್ರಕಲಾ ದ್ವಿತೀಯ, ಅಲ್ ಅಮೀನ್ ಪದವಿ ಕಾಲೇಜಿನ ಹುನೈನ್ ಹಜೇರಾ ಮತ್ತು ಸೈಯದಾ ಫಾತಿಮಾ ಬೇಗಂ ತೃತೀಯ ಬಹುಮಾನ ಪಡೆದರು.

ಪಿಪಿಟಿ ಸ್ಪರ್ಧೆಯಲ್ಲಿ ಬಸವಕಲ್ಯಾಣದ ಇಕ್ರಾ ಇಂಡಿಪೆಂಡೆಂಟ್ ಕಾಲೇಜಿನ ಜೈನಬ್ ಶೇಖ್ ಮತ್ತು ಜುನೇರಾ ಕಶಾಫ್ ಪ್ರಥಮ, ಬೀದರ್ನ ಜ್ಞಾನಸುಧಾ ಪದವಿ ಕಾಲೇಜಿನ ಕೀರ್ತಿ ಪಾಂಚಾಳ ದ್ವಿತೀಯ ಹಾಗೂ ಗುರುನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಅಮ್ತುಲ್ ಅಜೀಜ್ ತೃತೀಯ ಬಹುಮಾನ ಪಡೆದರು.

ತೆಲಂಗಾಣದ ಮಲ್ಲಾರೆಡ್ಡಿ ವಿಶ್ವ ವಿದ್ಯಾಪೀಠದ ಉಪಾಧ್ಯಕ್ಷೆ ಪ್ರೀತಿ ರೆಡ್ಡಿ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಪ್ರೊ. ಮುಸ್ತಫ ಬಸ್ತಿಕೋಡಿ, ಅಕ್ಕಪಡೆ ಮುಖ್ಯ ಸಲಹೆಗಾರ್ತಿ ಶೈನಿ ಪ್ರದೀಪ್ ಗುಂಟಿ, ‘ಸ್ಟ್ಯಾಂಡರ್ಡ್ ಟಚ್’ ಸಂಸ್ಥೆಯ ಸ್ಥಾಪಕ ಅಧಿಕಾರಿ ಹಂಜಾ ಮೌಜಂ ಅಲಿ, ಶಾಹೀನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ನಿರ್ದೇಶಕ ಅಬ್ದುಲ್ ಹಸೀಬ್, ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ ಮುಖೀತ್, ಅಕಾಡೆಮಿಕ್ ನಿರ್ದೇಶಕಿ ಶೈಸ್ತಾ ನಾಝ್, ಆಡಳಿತ ನಿರ್ದೇಶಕಿ ಜಮೀಲಾ ವಫಾ, ದಿ ಎಚ್.ಆರ್.ಎಸ್ ಶೋ ಸಂಸ್ಥಾಪಕ ಹಬೀಬ್ ಉರ್ ರೆಹಮಾನ್ ಶಹಾಬಾದಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-33-2131485455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.