ಬೀದರ್: ‘ನಗು ಎನ್ನುವುದು ದೇವರು ಮನುಷ್ಯರಿಗೆ ನೀಡಿದ ಅಮೂಲ್ಯವಾದ ವರ. ಮನಸ್ಸು ಬಿಚ್ಚಿ ಮಾತನಾಡುವುದು ಮತ್ತು ನಗು ಆರೋಗ್ಯಕರ ಜೀವನಕ್ಕೆ ದಿವ್ಯೌಷಧ’ ಎಂದು ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ತಿಳಿಸಿದರು.

ವಿಶ್ವ ನಗೆ ದಿನಾಚರಣೆ ಅಂಗವಾಗಿ ನಗರದ ಪಾಪನಾಶದಲ್ಲಿ ಏರ್ಪಡಿಸಿದ್ದ ನಗೆ ಯೋಗ ಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಒಳಗೆ ಒಂದು, ಹೊರಗೆ ಒಂದು ರೀತಿಯಲ್ಲಿ ಬದುಕುವವರು ನಿಜವಾದ ಸುಖ ಅನುಭವಿಸಲು ಸಾಧ್ಯವಿಲ್ಲ. ನಗು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಾನಸಿಕ ಸಮತೋಲನ ಕಾಪಾಡುತ್ತದೆ’ ಎಂದು ತಿಳಿಸಿದರು.

‘ಶರಣರು ಅನಾದಿ ಕಾಲದಿಂದ ಜನರನ್ನು ನಗಿಸುವ ಕಾಯಕವನ್ನು ಪ್ರೋತ್ಸಾಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಲೆಯನ್ನು ಕಾಯಕ ಮಾಡಿಕೊಂಡು ಹಲವರು ಸಮಾಜಕ್ಕೆ ಹಾಸ್ಯ ಮೂಲಕ ಸಂತೋಷ ಹಂಚುತ್ತಿದ್ದಾರೆ. ಹಿರಿಯರ ಅನುಭವ ಸಮಾಜಕ್ಕೆ ಅಮೂಲ್ಯವಾಗಿದ್ದು, ಅವರನ್ನು ಗೌರವಿಸಿ ಕಾಪಾಡುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.

ಅಮರನಾಥ ಸೋಲಪೂರ್ ಮಾತನಾಡಿ, ನಗುವಿನಿಂದ ಆರೋಗ್ಯದ ಮೇಲೆ ಆಗುವ ಸಕಾರಾತ್ಮಕ ಪರಿಣಾಮಗಳನ್ನು ವಿವರಿಸಿದರು.

ಅಕ್ಕಮಹಾದೇವಿ ಮಹಿಳಾ ನಗೆ ಯೋಗ ಕೂಟವನ್ನು ಗಂಗಾಂಬಿಕಾ ಅಕ್ಕ ಉದ್ಘಾಟಿಸಿದರು. ಸರಸ್ವತಿ ಬೆಳ್ಳಾ ಅಧ್ಯಕ್ಷರಾಗಿ ಆಯ್ಕೆಯಾದರು.

ಈ ಸಂದರ್ಭದಲ್ಲಿ ಸಿದ್ದಯ್ಯ ಕವಡಿಮಠ, ಗಂಗಪ್ಪ ಸಾವಳ, ಶಂಕರ್ ರಾವ್ ಚಿದರಿ, ಅಶೋಕ್ ಕುಮಾರ್ ಕರಂಜಿ, ಸುನೀಲ್ ಗಂಗಾಶ್ರೀ, ಯೋಗೇಂದ್ರ ಯದಲಾಪೂರೆ, ಎಸ್.ಬಿ. ಬಿರಾದಾರ, ದೇಶಪ್ಪ ಬೋರುಗುಡ್ಡೆ, ಪಂಚಾಕ್ಷರಿ ಮಲ್ಲಿಕಾರ್ಜುನ, ಅಶೋಕ್ ಶಾಲಕ್ಕೆ, ಶಿವರಾಜ್ ಬುಕ್ಕ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-33-2068553484

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.