ಬೀದರ್: ‘ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು’ ಎಂದು ಡಿವಿಜನ್ ಲೀಡ್ ದೇಶಪಾಂಡೆ ಸ್ಕೀಲಿಂಗ್ ಫೌಂಡೇಷನ್ನ ಅಜೀತ ಕುಲಕರ್ಣಿ ಹೇಳಿದರು.

ನಗರದ ಬಿವಿಬಿ ಕಾಲೇಜಿನಲ್ಲಿ ಎನ್ಎಸ್ಎಸ್ ಶಿಬಿರದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘‘ಇಂದಿನ ವಿದ್ಯಾರ್ಥಿಗಳ ತಾವು ಶಿಕ್ಷಣ ಪಡೆದ ನಂತರ ಹುದ್ದೆ ಪಡೆದುಕೊಳ್ಳಲು ದಾರಿ ಹುಡುಕುತ್ತಾ ಕೂಡದೆ ನಮ್ಮ ಫೌಂಡೇಷನ್ನಲ್ಲಿ 3 ತಿಂಗಳು ತರಬೇತಿಯ ನೀಡುವುದರ ಜೊತೆಗೆ ಉದ್ಯೋಗದ ಅವಕಾಶ ಮಾಡಿಕೊಡುತ್ತೇವೆ. ಇದರ ಲಾಭ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು’ ಎಂದರು.

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯ ಹಾಗೂ ಬಿವಿಬಿ ಶಾಲಾ ಕಾಲೇಜು ಸಂಚಾಲಕ ರಜನೀಶ್ ಎಸ್. ವಾಲಿ, ಪ್ರಾಚಾರ್ಯ ದೀಪಾ ರಾಗ, ಎನ್ಎಸ್ಎಸ್ ಘಟಕದ ಅಧಿಕಾರಿ ಲಕ್ಷ್ಮೀ ವಿಶ್ವನಾಥ, ಬಸವರಾಜ ಎಸ್. ಬಿರಾದಾರ, ಬೋಧಕ, ಬೋಧಕೇತರರ ಸಿಬ್ಬಂದಿಗಳು ಇದ್ದರು.

ಉಪನ್ಯಾಸಕಿ ಮೀನಾಕ್ಷಿ ಕಮಠಾಣೆ ಸ್ವಾಗತಿಸಿದರು. ವೀರೇಂದ್ರ ಜಿಂದೆ ನಿರೂಪಿಸಿದರು. ನೆಹರು ಪವಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-33-2117095760

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.