ಬೀದರ್: ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಮತ್ತು ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ಕೋರ್ ವಿಜ್ಞಾನ ಚಟುವಟಿಕೆ ಕೇಂದ್ರದಿಂದ ನಗರದಲ್ಲಿ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಸ್ತೃತ ಕಲಿಕಾವರ್ಧನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಡಿಡಿಪಿಐ ಎಚ್.ಜಿ. ಸುರೇಶಗೌಡ ಉದ್ಘಾಟಿಸಿ, ಕಲಿಕಾ ವರ್ಧನೆ ಕಾರ್ಯಕ್ರಮವು ಬಹಳ ಉಪಯುಕ್ತವಾಗಿದ್ದು, ಇದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿ, ಸೃಜನಶೀಲತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ವಿಜ್ಞಾನ ಚಟುವಟಿಕೆಗಳ ಮೂಲಕ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ವಿವಿಧ ಪ್ರಯೋಗಗಳು ಹಾಗೂ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಕಲಿಕೆ ಮಟ್ಟ ಹೆಚ್ಚಲಿದೆ ಎಂದರು.

ಬಿಇಒ ಮರ್ಖಾನ್, ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿಯ ತಾನಾಜಿ ಕಾರಾಬಾರಿ, ಮುಖ್ಯಶಿಕ್ಷಕ ಫುರ್ ಖಾನ್, ಅಗಸ್ತ್ಯ ಫೌಂಡೇಶನ್ ಮುಖ್ಯಸ್ಥ ಬಾಬುರಾವ್ ಸಲಸಾರೆ, ಶಿಕ್ಷಕರಾದ ಸೂರ್ಯನ್, ಸಂತೋಷ್ ಹೊನ್ನಿಕೇರಿ, ವಿಷ್ಣುಕಾಂತ್ ಠಾಕೂರ್, ಅನಿತಾ, ಸಂಪನ್ಮೂಲ ವ್ಯಕ್ತಿಗಳಾದ ವಿಶಾಲ, ವೀರೇಶ್ ಪಾಂಚಾಳ ಮತ್ತು ಲಿಖಿನ್ ನಾಯಕ ಉಪಸ್ಥಿತರಿದ್ದರು.

ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆ, ಗಾದಗಿ ಸರ್ಕಾರಿ ಪ್ರೌಢಶಾಲೆ, ಶ್ರೀಮಂಡಲ್ ಸರ್ಕಾರಿ ಪ್ರೌಢಶಾಲೆ, ಹಮೀಲಾಪೂರ ನೆಹರೂ ಪ್ರೌಢಶಾಲೆ, ಬೀದರ್ನ ವಿದ್ಯಾರಣ್ಯ ಪ್ರೌಢಶಾಲೆ, ಜನವಾಡ ಸರ್ಕಾರಿ ಪ್ರೌಢಶಾಲೆ, ನೌಬಾದ್ ಹಾಗೂ ಮೈಲೂರ್ ಶಾಲೆಗಳ 90ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-33-639077835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.