ಬೀಳಗಿ: ‘ಅಂಬೇಡ್ಕರ್ ಅವರ ವಿಚಾರ ಹಾಗೂ ಬರಹಗಳು ದೇಶದ ಸಮಾಜಶಾಸ್ತ್ರ, ರಾಜನೀತಿ ಶಾಸ್ತ್ರಗಳಿಗೆ ಅಮೂಲ್ಯ ಕೊಡುಗೆಗಳಾಗಿವೆ’ ಎಂದು ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.

ತಾಲ್ಲೂಕಿನ ಅನಗವಾಡಿ ಗ್ರಾಮದ ಮಾದಿಗ ಸಮುದಾಯದ ನೇತೃತ್ವದಲ್ಲಿ ಶುಕ್ರವಾರ ನಡೆದ ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದರು.

ಉದ್ಯಮಿ ಪ್ರವೀಣ ಪಾಟೀಲ ಮಾತನಾಡಿ, ‘ಶೋಷಿತರ ಕಲ್ಯಾಣಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಅಂಬೇಡ್ಕರ್ ಅವರ ಬದುಕು ಹಾಗೂ ಸಾಧನೆ ಅನುಕರಣೀಯ’ ಎಂದರು.

ಎಂಆರ್ಎಚ್ಎಸ್ ರಾಜ್ಯ ಕಾರ್ಯದರ್ಶಿ ಸೋಮು ಚೂರಿ ಪ್ರಾಸ್ತಾವಿಕ ಮಾತನಾಡಿ, ‘ಭಾರತೀಯ ಸಂವಿಧಾನ ರಚನೆಯಲ್ಲಿ ಮಹಾನ್ ಪಾತ್ರ ನಿರ್ವಹಿಸಿದ ಮಹನೀಯರ ಜಯಂತ್ಯುತ್ಸವ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಮಹತ್ವದ ಉದ್ದೇಶ ಇದಾಗಿದೆ’ ಎಂದರು.

‘ಸಂವಿಧಾನ ಜಾರಿಗೆ ಬರುವ ಮುನ್ನ ಸಮಾಜದಲ್ಲಿ ಅಸಮಾನತೆ ಪ್ರಚಲಿತದಲ್ಲಿತ್ತು. ಅಂತಹ ವ್ಯವಸ್ಥೆ ಅಳಿಸಿ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ದಾರಿ ತೆರೆದವರು ಅಂಬೇಡ್ಕರ್, ಜಗಜೀವನರಾಂ ಅವರು ದಲಿತರ ಧ್ವನಿಯಾಗಿದ್ದರು’ ಮಾದಿಗ ಮಿಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ತಿಳಿಸಿದರು.

ಅನಗವಾಡಿ ಪೂರ್ಣಾನಂದ ಆಶ್ರಮದ ಅನಸೂಯಾ ತಾಯಿ ಸಾನ್ನಿಧ್ಯ ವಹಿಸಿದ್ದರು. ರಮೇಶ ಅಕ್ಕಿಮರಡಿ, ವಕೀಲ ಅಶೋಕ ಮಾದರ, ರವಿ ಮಾದರ, ಫಕೀರಯ್ಯ ಮಠಪತಿ, ಮಿಥುನ ನಾಯಕ, ಮೆಹಬೂಬ್ ಜಮಖಂಡಿ, ಮಲ್ಲಪ್ಪಗೌಡ ಮೇಟಿ, ಮುತ್ತಣ್ಣ ಅಂಗಡಿ, ವೈ.ವೈ. ತಿಮ್ಮಾಪುರ, ಕೃಷ್ಣಾ ಮಾದರ, ಮಹೇಶ ಹುಗ್ಗಿ, ಸಿದ್ದು ಮಾದರ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-19-716493602

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.