ಬೀಳಗಿ: ‘ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿಯ ಮಕ್ಕಳಿಗೆ ಕನ್ನಡ ಹಾಗೂ ಇಂಗ್ಲಿಷ್ ದ್ವಿಭಾಷಾ ಮಾಧ್ಯಮದಲ್ಲಿ ಕಲಿಕೆ ಪ್ರಾರಂಭವಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಆದಾಪೂರ ತಿಳಿಸಿದರು.

ಸ್ಥಳೀಯ ಬೀಳಗಿ ಕ್ರಾಸ್ -3ರಲ್ಲಿನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದರು.

‘ಕರ್ನಾಟಕ ಪಬ್ಲಿಕ್ ಸ್ಕೂಲ್, ಪಿ.ಎಂ.ಶ್ರೀ ಶಾಲೆ ಹಾಗೂ 25 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಪ್ರಾರಂಭಿಸಲಾಗುವುದು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮೊನೋಗ್ರೇಡ್’ ದ್ವಿಭಾಷೆ ಮಾಧ್ಯಮ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು, ಕನ್ನಡ ಮಾಧ್ಯಮ ಜೊತೆಗೆ ಇಂಗ್ಲಿಷ್ ಮಾಧ್ಯಮ ಕಲಿಕೆಗೆ ಒತ್ತು ನೀಡಿ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಮಕ್ಕಳನ್ನು ಅಣಿಗೊಳಿಸಲು ಸಹಾಯಕಾರಿಯಾಗಿದೆ’ ಎಂದು ಹೇಳಿದರು.

ಈ ವರ್ಷದ ಸಮಗ್ರ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕುರಿತು ತಿಳಿಸಿದರು. ದ ಶಿಕ್ಷಕರ ಆನ್ಲೈನ್ ಹಾಜರಾತಿಗಾಗಿ ಕರ್ನಾಟಕ ಮುಂದುವರೆದ ಹಾಜರಾತಿ ವ್ಯವಸ್ಥೆ (ಕ್ಯಾಮ್ಸ) ಎಲ್ಲರೂ ನೋಂದಣಿ ಮಾಡಿಕೊಂಡಿದ್ದು, ಅದರ ಬಳಕೆ ಬಗ್ಗೆ ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶಿವಾಜಿ ನಾಯಕ, ತಾಲ್ಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಸ್.ಎ.ಎತ್ತಿನಮನಿ, ಜಗದೀಶ ಖೋತ, ಶಿಕ್ಷಣ ಸಂಯೋಜಕ (ಪ್ರೌಢ ವಿಭಾಗ ), ಮಂಜುನಾಥ ಕಣಬೂರ.ಬಿ.ಆರ್.ಪಿ(ಪ್ರೌಢ) ಸೋಮಶೇಖರ, ತಳೇವಾಡ.ಬಿ.ಆರ್.ಪಿ (ಪ್ರೌಢ), ಕೆ.ಎಸ್.ಗೌಡ್ರ ಶಿಕ್ಷಣ ಸಂಯೋಜಕ (ಪ್ರಾಥಮಿಕ), ಎಚ್.ಟಿ.ಸಣ್ಣಗೌಡರ, ಎನ್.ಎಸ್. ಪಾಟೀಲ್, ಬಸವರಾಜ ಲಮಾಣಿ, ಸಿ.ಆರ್.ಪಿಯವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-19-777177725

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.