ಬ್ರಹ್ಮಾವರ: ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಶಾಲೆಯ 28 ವಿದ್ಯಾರ್ಥಿಗಳು ಹಾಗೂ 4 ಶಿಕ್ಷಕರ ತಂಡವು ಫಿನ್ಲ್ಯಾಂಡ್ ಮತ್ತು ಎಸ್ಟೋನಿಯಾದಲ್ಲಿ ನಡೆದ ಒಂದು ವಾರದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ.

ಫ್ಯೂಚರ್ ಎಕ್ಸ್ ಶೀರ್ಷಿಕೆಯಡಿ ಹೆಲ್ಸಿಂಕಿ ವಿಶ್ವವಿದ್ಯಾಲಯ, ಲೈಫಾಲಜಿ ಮತ್ತು ಲಿಟಲ್ ರಾಕ್ ಇಂಡಿಯನ್ ಶಾಲೆಯ ಜಂಟಿ ಸಹಯೋಗದೊಂದಿಗೆ ಈ ಫಿನ್ಲ್ಯಾಂಡ್ 2030 ಅಭಿಯಾನ ನಡೆದಿತ್ತು.

ಶಾಲೆಯ ಉಪ ಪ್ರಾಂಶುಪಾಲೆ ಜೆಸ್ಸಿ ಆಂಡ್ರಸ್ ನೇತೃತ್ವದಲ್ಲಿ ನಡೆದ ಈ ಶೈಕ್ಷಣಿಕ ಕಾರ್ಯಾಗಾರ ಪ್ರವಾಸದಲ್ಲಿ 2030ರ ಪಠ್ಯಕ್ರಮದ ಆಧಾರದ ಮೇಲೆ ಭಾವನಾತ್ಮಕ ಕೌಶಲಗಳು, 21ನೇ ಶತಮಾನದ ಜೀವನ ಕೌಶಲಯಗಳು, ಭವಿಷ್ಯದ ವೃತ್ತಿ ಯೋಜನೆ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಬಗ್ಗೆ ತರಬೇತಿ ನೀಡಲಾಯಿತು.

ವಿದ್ಯಾರ್ಥಿಗಳು ಆಲ್ಲೊ ವಿಶ್ವವಿದ್ಯಾಲಯ, ಹೆಲ್ಸಿಂಕಿ ವಿಶ್ವವಿದ್ಯಾಲಯ ಮತ್ತು ಟ್ಯಾಲಿನ್ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಪರಿಸರವನ್ನು ಗಮನಿಸಿದರು. ನೊಬೆಲ್ ಪ್ರಶಸ್ತಿ ವಿಜೇತ ಡಾ. ಸರ್ ರಿಚರ್ಡ್ ಜೆ. ರಾಬರ್ಟ್ಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಈ ಕಾರ್ಯಾಗಾರದಲ್ಲಿ ಅತ್ಯುತ್ತಮ ಕ್ಯಾಂಪರ್ ಪ್ರಶಸ್ತಿಯನ್ನು ಅಬಾನಿ ಕಿರಣ್ ಶೆಟ್ಟಿ, ನೇಹಾ ಎಸ್. ಭಟ್ ಮತ್ತು ಮಹಿ ಗಡಿಚೆರ್ಲಾ ಗೆದ್ದುಕೊಂಡಿದ್ದಾರೆ. ಸ್ಟಾರ್ಟ್ ಅಪ್ ಹೂಡಿಕೆ ವಿಭಾಗದಲ್ಲಿ ಜಶ್ ಕೌಶಲ್ ವೋರಾ ನೇತೃತ್ವದ ತಂಡವು ಪಿಚಿಂಗ್ ಸ್ಪರ್ಧೆಯಲ್ಲಿ ಜಯಗಳಿಸಿದ್ದು, ತಮ್ಮ ಕಲ್ಪನೆಯನ್ನು ಸ್ಟಾರ್ಟ್ ಅಪ್ ಅಭಿವೃದ್ಧಿಪಡಿಸಲು ₹1.2 ಲಕ್ಷ ಆರಂಭಿಕ ಹೂಡಿಕೆಯನ್ನು ಬಹುಮಾನವಾಗಿ ಪಡೆದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-28-926449319

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.