ಬ್ರಹ್ಮಾವರ: ಮಕ್ಕಳು ನಾಟಕ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸುವುದಕ್ಕೆ ಪ್ರೇರಣೆ ನೀಡಿದ್ದಲ್ಲಿ ಜೀವನ ಎದುರಿಸುವ ಶಕ್ತಿ ಅವರಲ್ಲಿ ಮೂಡುತ್ತದೆ ಎಂದು ವಕೀಲ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.

ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆದ ಬಣ್ಣ ನಾಟಕೋತ್ಸವ 12ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್ಎಂಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಐವನ್ ಸುವಾರಿಸ್ ಮಾತನಾಡಿ, ನಾವು ಬುದ್ಧಿವಂತರು ಆದರೆ ಚಿಂತನೆಯ ಕೊರತೆ ಇದೆ. ಚಿಂತನೆಯನ್ನು ಹುಟ್ಟು ಹಾಕುವ ಕೆಲಸವನ್ನು ನಾಟಕಗಳು ಮಾಡುತ್ತವೆ. ಭೂಮಿಕಾ ರಂಗ ತಂಡವೂ ತಮ್ಮ ನಾಟಕಗಳ ಮೂಲಕ ಹೊಸ ಚಿಂತನೆಗಳನ್ನು ಹುಟ್ಟು ಹಾಕುತ್ತಿದೆ ಎಂದರು.

ಉದ್ಯಮಿ ಪ್ರಥ್ವಿರಾಜ್ ಶೆಟ್ಟಿ ಮಾತನಾಡಿ, ಬಾಲ್ಯದಲ್ಲೇ ನಾಟಕ ಶಿಕ್ಷಣ ಮಕ್ಕಳಿಗೆ ನೀಡಬೇಕು. ಅದರಿಂದ ಮಕ್ಕಳಿಗೆ ಜೀವನ ದರ್ಶನವಾಗುತ್ತದೆ ಎಂದು ಹೇಳಿದರು.

ಬ್ರಹ್ಮಾವರ ರೋಟರಿ ಮಾಜಿ ಅಧ್ಯಕ್ಷ ದಿನೇಶ್ ನಾಯಿರಿ, ಜಯಂಟ್ಸ್ ಗ್ರೂಪ್ನ ಸುಂದರ್ ಪೂಜಾರಿ, ಭೂಮಿಕಾ ಹಾರಾಡಿ ಇದರ ಅಧ್ಯಕ್ಷ ಆರ್.ಎಂ ಸಾಮಗ, ಸಂಚಾಲಕ ರಾಮ್ ಶೆಟ್ಟಿ ಹಾರಾಡಿ, ಗೌರವಾಧ್ಯಕ್ಷ ರವಿ ಎಸ್ ಪೂಜಾರಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-28-260839839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.