ಬೈಲಹೊಂಗಲ: ‘ಶತಮಾನ ಕಂಡ ನಾಡಿನ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕನ್ನಡಿಗರೆಲ್ಲರೂ ಆಜೀವ ಸದಸ್ಯರಾಗಿರಿ’ ಎಂದು ಉಪನ್ಯಾಸಕ ಡಾ. ಸಂತೋಷ ಯಕ್ಕುಂಡಿ ಹೇಳಿದರು.

ನಗರದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಎಚ್.ವಿ. ಕೌಜಲಗಿ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ’ ಕುರಿತು ಅವರು ಉಪನ್ಯಾಸ ನೀಡಿದರು.

‘ಕನ್ನಡದ ನೆಲ, ಜಲ, ನಾಡು, ನುಡಿ, ಸಂಸ್ಕೃತಿಯನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಾಪನೆಯಾದ ಪರಿಷತ್ತು ಇಂದು ಲಕ್ಷಾಂತರ ಸದಸ್ಯರನ್ನು ಹೊಂದಿದೆ. ಕರ್ನಾಟಕ ಏಕೀಕರಣದಲ್ಲಿ ಪರಿಷತ್ತು ಪ್ರಮುಖ ಪಾತ್ರ ವಹಿಸಿದೆ. ಸಾಹಿತ್ಯ ಸಮ್ಮೇಳನ, ವಿಚಾರ ಗೋಷ್ಠಿ, ಪುಸ್ತಕ ಪ್ರಕಟಣೆ, ಹಲವು ಕಾರ್ಯ ಮಾಡುವುದರ ಜೊತೆಗೆ ನಾಡಿನ ಸಾಹಿತಿಗಳಿಗೆ ಉತ್ತೇಜನ ನೀಡುವ ಪರಿಷತ್ತು ಕನ್ನಡದ ಅಸ್ಮಿತೆಯ ಪ್ರತೀಕವಾಗಿ ಹೊರಹೊಮ್ಮಿದೆ’ ಎಂದರು.

ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಎನ್. ಪಾಟೀಲ ಮಾತನಾಡಿ, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡದ ಬಗ್ಗೆ ನಮಗೆಲ್ಲ ಹೆಮ್ಮೆ, ಅಭಿಮಾನ ಇರಬೇಕು. ಕನ್ನಡಕ್ಕಾಗಿ ಒಂದಾಗುವ ಮನೋಭಾವ ಬೆಳೆಸಿಕೊಂಡು ಕನ್ನಡದ ತೇರನ್ನು ಎಲ್ಲರೂ ಸೇರಿ ಎಳೆಯೋಣ’ ಎಂದರು.

ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಎನ್.ಆರ್. ಠಕಾಯಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿ ತಾಜೀನ್ ಸಂಗೊಳ್ಳಿ, ಸಾಕ್ಷಿ ನೇಸರಗಿ, ನಿಸರ್ಗ ಹುದ್ದಾರ, ಕನ್ನಡ ಮಾಧ್ಯಮದಲ್ಲಿ ಅತ್ಯುತ್ತಮ ಅಂಕ ಗಳಿಸಿದ ರವಿ ಗೋಡಿ, ಶ್ರೇಯಾ ಹೂಲಿಮಠ, ದೀಪಾ ಲಕ್ಕುಂಡಿ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಮಾಜಿ ಅಧ್ಯಕ್ಷ ಮೋಹನ ಪಾಟೀಲ, ಗೌರವ ಕಾರ್ಯದರ್ಶಿ ಮಂಜುಳಾ ಶೆಟ್ಟರ, ಪದಾಧಿಕಾರಿಗಳಾದ ಪ್ರೇಮ ಅಂಗಡಿ, ಶ್ರೀಕಾಂತ ಉಳ್ಳೇಗಡ್ಡಿ, ಲಕ್ಷ್ಮೀ ಮುಗಡ್ಲಿಮಠ, ಕಾಲೇಜಿನ ಸಿಬ್ಬಂದಿಗಳಾದ ಎಂ.ಎಸ್. ಪಟ್ಟಣಶೆಟ್ಟಿ, ಡಿ.ಬಿ. ನರಗುಂದ, ಅಮ್ರೋಜ್ ಜೋಸೆಫ್, ಪದ್ಮಶ್ರೀ ಪಾಟೀಲ, ಸುನಿಲ ಬಾಳಿ, ಸಂದೀಪ ಹೆದ್ದೂರಿ, ಸೈದುಸಾಬ ದಬಾಡಿ, ಪವಿತ್ರಾ ಪಚ್ಚೇದಾರ, ಕಸಾಪ ಪದಾಧಿಕಾರಿಗಳಾದ ಸಂತೋಷ ಹಡಪದ, ರಾಜು ಹಕ್ಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-21-1833488347

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.