ಬೈಂದೂರು: ‘ಶಾಲಾ ರಜೆಯ ಅವಧಿಯ ಸದುಪಯೋಗವಾಗುವುದರ ಜೊತೆಗೆ ಮಕ್ಕಳ ಮನೋವಿಕಾಸ, ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಪೂರಕ’ ಎಂದು ಬ್ಯಾಂಕ್ ನಿವೃತ್ತ ಅಧಿಕಾರಿ, ರೋಟರಿ ವಲಯ 1ರ ಕಾರ್ಯದರ್ಶಿ ನಾಯ್ಕನಕಟ್ಟೆಯ ಗೋವಿಂದ ಎಂ. ಹೇಳಿದರು.

ಇಲ್ಲಿನ ಸೇವಾ ಸಂಗಮ ಶಿಶುಮಂದಿರ ಆಶ್ರಯದಲ್ಲಿ ನಡೆದ ‘ನವೋಲ್ಲಾಸ’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕಲಾವಿದ, ಶಿಕ್ಷಕ ಚಂದ್ರನಾರಾಯಣ ಬಿಲ್ಲವ ಅವರು ಮಕ್ಕಳಿಗೆ ಹಲವು ರೀತಿಯ ಚಟುವಟಿಕೆಗಳನ್ನು ನಡೆಸಿದರು. ಶಿಬಿರದ ಅವಶ್ಯಕತೆಯ ಬಗ್ಗೆ ತಿಳಿಸಿದರು. ಅವರನ್ನು ಸೇವಾ ಸಂಗಮದ ಪುಟಾಣಿಗಳು, ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಲಾಯಿತು.

ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರವೀಂದ್ರ ಶಾನುಭಾಗ್, ವ್ಯವಸ್ಥಾಪಕ ದಿನೇಶ್, ಸುಧಾಕರ ಪಿ. ಬೈಂದೂರು, ಗುರುರಾಜ, ಆಶಾ ಕಿಶೋರ್, ಆಶಾ ದಿನೇಶ್, ರಾಜೇಶ್ವರಿ, ಮಾತಾಜಿಯವರಾದ ಸುಜಾತ ಚಂದ್ರಶೇಖರ್, ಸೌಮ್ಯ ಸುನಿಲ್ ಭಾಗವಹಿಸಿದ್ದರು. ಸಾನ್ವಿ ಡಿ. ಸ್ವಾಗತಿಸಿದರು. ಸನ್ವಿತಾ ವಂದಿಸಿದರು. ಸಾನ್ವಿ ಎನ್. ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-28-1708518649

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.