ಬೈಂದೂರು: ‘ಶಾಲೆಯ ಔಪಚಾರಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗದ ಆಸಕ್ತಿಯ ಅನೇಕ ವಿಷಯಗಳನ್ನು ಕಲಿಯಲು ಬೇಸಿಗೆ ಶಿಬಿರ ಅವಕಾಶ ಮಾಡಿಕೊಡುತ್ತದೆ. ರಜಾ ಸಮಯ ವ್ಯರ್ಥವಾಗುವುದನ್ನು ತಪ್ಪಿಸಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕೌಶಲ ಕಲಿಕೆಗೆ ವೇದಿಕೆ ಒದಗಿಸುತ್ತದೆ ಎಂದು ಸಾಹಿತಿ, ಮಾಜಿ ಸೈನಿಕ ಚಂದ್ರಶೇಖರ ನಾವಡ ಹೇಳಿದರು.

ಇಲ್ಲಿನ ಸೇವಾ ಸಂಗಮ ಶಿಶು ಮಂದಿರದಲ್ಲಿ ಆಯೋಜಿಸಿರುವ ಒಂದು ವಾರದ ಬೇಸಿಗೆ ಶಿಬಿರ ‘ನವೋಲ್ಲಾಸ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೇವಾ ಸಂಗಮ ಶಿಶು ಮಂದಿರ ಮಕ್ಕಳಲ್ಲಿ ಸಂಸ್ಕೃತಿಯ ಅರಿವನ್ನು ಕೊಡುವ, ಅವರನ್ನು ಸಂಸ್ಕಾರವಂತ ನಾಗರಿಕರಾಗಿಸುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ ಮಾತನಾಡಿ, ಶಿಬಿರದಲ್ಲಿ ಮಕ್ಕಳು ಸಂತೊಷದಿಂದ ಭಾಗವಹಿಸುವ ಮೂಲಕ ಮೊಬೈಲ್, ಟಿ.ವಿ ಮೊದಲಾದ ವ್ಯಸನಗಳಿಂದ ದೂರವಾಗಲು ಸಹಾಕಾರಿಯಾಗಲಿದೆ ಎಂದರು.

ಸೇವಾ ಸಂಗಮದ ಉಪಾಧ್ಯಕ್ಷ ರವೀಂದ್ರ ಶಾನುಭಾಗ್, ಸದಸ್ಯೆ ನಿರ್ಮಲಾ ಕಿಣಿ, ಶಿಬಿರದ ಸಂಪನ್ಮೂಲ ವ್ಯಕ್ತಿ, ಚಿತ್ರ ಕಲಾವಿದ ಗಿರೀಶ್ ಗಾಣಿಗ ತಗ್ಗರ್ಸೆ, ಜಯಲಕ್ಷ್ಮಿ, ಮಾತಾಜಿಯರಾದ ಸುಜಾತ ಚಂದ್ರಶೇಖರ್, ಸೌಮ್ಯಾ ಸುನಿಲ್ ಭಾಗವಹಿಸಿದ್ದರು. ಆಶಾ ದಿನೇಶ್ ಸ್ವಾಗತಿಸಿದರು. ಆಶಾ ಕಿಶೋರ್ ವಂದಿಸಿದರು. ಶಿಕ್ಷಕ ಪಿ. ಸುಧಾಕರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-28-2023268134

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.