ನವದೆಹಲಿ: ಹತ್ತು ಮತ್ತು ಹನ್ನೆರಡನೆಯ ತರಗತಿಯ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾಪನಕ್ಕಾಗಿ ಪರಿಚಯಿಸಲಾದ ‘ಆನ್ ಸ್ಕ್ರೀನ್ ಮಾರ್ಕಿಂಗ್’ (ಒಎಸ್ಎಂ) ವ್ಯವಸ್ಥೆ– ಆನ್ಮಾರ್ಕ್ ಪೋರ್ಟಲ್ನಲ್ಲಿ ದೋಷ ಇತ್ತು ಎನ್ನುವುದನ್ನು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ) ಭಾನುವಾರ ಒಪ್ಪಿಕೊಂಡಿದೆ.

ಆನ್ಮಾರ್ಕ್ ಪೋರ್ಟಲ್ನ ಪಾವತಿ ದೋಷವನ್ನು ಐಐಟಿ ಸೈಬರ್ ತಜ್ಞರ ನೆರವಿನಿಂದ ಸರಿಪಡಿಸಲಾಗಿದೆ. ಈ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ ’ನೈತಿಕ ಹ್ಯಾಕರ್’ಗಳಿಗೆ ಮತ್ತು ಸಾರ್ವಜನಿಕರಿಗೆ ಧನ್ಯವಾದ ಎಂದು ಸಿಬಿಎಸ್ಇ ಪ್ರಕಟಣೆ ತಿಳಿಸಿದೆ.

ಆನ್ಮಾರ್ಕ್ ಪೋರ್ಟಲ್ನಪಾವತಿ ವ್ಯವಸ್ಥೆಯ ಮೇಲೆ ಶನಿವಾರ ಸೈಬರ್ ದಾಳಿ ನಡೆದಿದ್ದು, ಕೆಲವು ವಿದ್ಯಾರ್ಥಿಗಳು ಅನಧಿಕೃತವಾಗಿ ಪೋರ್ಟಲ್ ಪ್ರವೇಶಿಸಿ, ಪಾವತಿ ವ್ಯವಸ್ಥೆಯನ್ನು ದುರುಪಯೋಗಪಡಿಸಿ ಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ವಿನೋದಕ್ಕಾಗಿ ಅಥವಾ ದುರುದ್ದೇಶದಿಂದ ನಡೆದ ಈ ಕೃತ್ಯದ ಬೆನ್ನಲ್ಲೇ ಸಿಬಿಎಸ್ಇ, ಪೋರ್ಟಲ್ನ ಭದ್ರತೆ ವ್ಯವಸ್ಥೆಯನ್ನು ಹೆಚ್ಚಿಸಿದೆ.

‘ತಾಂತ್ರಿಕ ಸಮಸ್ಯೆ ಬಗೆಹರಿ ದರೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆನ್ಲೈನ್ ಮೂಲಕ ಹಣ ವರ್ಗಾವಣೆಯ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಪೇಮೆಂಟ್ ಗೇಟ್ವೇ ವ್ಯವಸ್ಥೆ ಮೇಲೆ ಮತ್ತೆ ಸೈಬರ್ ದಾಳಿ ನಡೆಯದಂತೆ ಸುರಕ್ಷತಾ ಕ್ರಮವನ್ನು ಬಲಪಡಿಸಲಾಗಿದೆ. ಪೋರ್ಟಲ್ ದೋಷರಹಿತವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಮತ್ತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಲ್ಲಿ secy-cbse@nic.in ಮೂಲಕ ಸೈಬರ್ ಭದ್ರತಾ ತಂಡವನ್ನು ಸಂಪರ್ಕಿಸಬಹುದು ಎಂದು ಸಿಬಿಎಸ್ಇ ಪ್ರಕಟಣೆ ತಿಳಿಸಿದೆ.

ನವದೆಹಲಿ: 10 ಮತ್ತು 12ನೇ ತರಗತಿ ಉತ್ತರ ಪತ್ರಿಕೆಗಳ ಡಿಜಿಟಲ್ ಮೌಲ್ಯಮಾ ಪನಕ್ಕಾಗಿ ಪರಿಚಯಿಸಲಾದ ಒಎಸ್ಎಂ ವ್ಯವಸ್ಥೆ– ಆನ್ಮಾರ್ಕ್ ಪೋರ್ಟಲ್ನಲ್ಲಿ ದೋಷ ಇತ್ತು ಎನ್ನುವುದನ್ನು ಸಿಬಿಎಸ್ಇ ಒಪ್ಪಿಕೊಂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-4-620678999

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.