ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆಶ್ರಯದಲ್ಲಿ ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ‘ಮನ ಮನೆ ಮನೆಗೆ ಮನೆ ಮನಕೆ ಬಾಬಾಸಾಹೇಬರು’ ಅಭಿಯಾನ ಗುರವಾರ ಜರುಗಿತು.

ಕಾಲೇಜು ಮೈದಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಸಭೆ ನಡೆಸಲಾಯಿತು.

ಪ್ರೊ. ಮಹಾಂತೇಶ ಜನವಾಡ ಮಾತನಾಡಿ, ‘ಅಂಬೇಡ್ಕರರು ಸಮಾನತೆಯ ಪ್ರತಿಪಾದಕರಾಗಿದ್ದರು. ಸಂವಿಧಾನ ರಚನೆ ಮೂಲಕ ದೇಶಕ್ಕೆ ಭದ್ರ ಬುನಾದಿ ಒದಗಿಸಿದರು. ಪ್ರತಿಯೊಬ್ಬರೂ ಅಂಬೇಡ್ಕರರ ಚಿಂತನೆ ರೂಢಿಸಿಕೊಳ್ಳಿ’ ಎಂದರು.

ಎಸ್.ಎಸ್. ದೇಸಾಯಿ ಮಾತನಾಡಿ, ‘ಈ ಅಭಿಯಾನದ ಮೂಲಕ ಅಂಬೇಡ್ಕರರ ಚಿಂತನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಅಂಬೇಡ್ಕರ್ ಅವರಂತೆ ಶಿಸ್ತು, ಶಿಕ್ಷಣಕ್ಕೆ ಒತ್ತು ನೀಡಿದರೆ ಜೀವನದಲ್ಲಿ ಸಾಧನೆ ಮಾಡಬಹುದು, ದೇಶಕ್ಕೆ ಕೊಡುಗೆ ನೀಡಬಹುದು’ ಎಂದು ತಿಳಿಸಿದರು.

ಪ್ರಾಚಾರ್ಯ ಎಸ್.ಬಿ. ರಾಠೋಡ, ಗ್ರಂಥಪಾಲಕ ಎಂ.ಕೆ. ಬಿರಾದಾರ, ಉಪನ್ಯಾಸಕರಾದ ಬಸವರಾಜ ಯಳ್ಳೂರ, ಸದಾನಂದ ಪಾಟೀಲ, ಎಸ್.ಎಸ್.ಅವಟಿ, ಮುರಗೇಶ ಕೆ.ಎಂ., ರಶ್ಮಿ ಗಜಕೋಶ, ಅಪ್ಪು ಜಾಧವ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-26-1238026325

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.