ಚಡಚಣ: ‘ಪಟ್ಟಣದಲ್ಲಿ 2026–27ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಗೊಳ್ಳಲಿದೆ. ಪಟ್ಟಣದಲ್ಲಿ ಮಂಜೂರಾದ ಸರ್ಕಾರಿ ಪದವಿ ಕಾಲೇಜು ಬೇರೆಡೆ ಸ್ಥಳಾಂತರಗೊಳಿಸಲು ಹುನ್ನಾರ ನಡೆದಿದೆ ಎಂಬ ವದಂತಿಗಳಿಗೆ ಪಟ್ಟಣದ ನಿವಾಸಿಗಳು ಕಿವಿಗೊಡಬಾರದು’ ಎಂದು ಶಾಸಕ ವಿಠ್ಠಲ ಕಟಕಧೊಂಡ ಸ್ಪಷ್ಟಪಡಿಸಿದರು,

ಪಟ್ಜಟಣದಲ್ಲಿ ಮಂಗಳವಾರ ಆಯೋಜಿಸಲಾದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲಸವಿಲ್ಲದ ಕೆಲವರು ನಾನು ಚಡಚಣ ಪಟ್ಟಣಕ್ಕೆ ಮಂಜೂರಾದ ಸರ್ಕಾರಿ ಪದವಿ ಕಾಲೇಜನ್ನು ಕನ್ನೂರ ಗ್ರಾಮಕ್ಕೆ ಸ್ಥಳಾಂತರಿಸುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ವಿಷಾದನೀಯ’ ಎಂದರು.

‘ಚಡಚಣದಲ್ಲಿ ಪದವಿ ಕಾಲೇಜು ಪ್ರಾರಂಭವಾಗಬೇಕೆಂದು ಮುಖ್ಯ ಮಂತ್ರಿ ಮತ್ತು ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೇರಿ 2026-27 ಸಾಲಿನ ಆಯವ್ಯಯದಲ್ಲಿ ಚಡಚಣಕ್ಕೆ ಪದವಿ ಕಾಲೇಜು ಮಂಜೂರು ಮಾಡಿಸಿದ್ದೆನೆ. ಒಂದು ವೇಳೆ ಬೇರೆ ಕಡೆ ಪದವಿ ಕಾಲೇಜು ಪ್ರಾರಂಭ ಮಾಡುವ ಉದ್ದೇಶ ನನಗಿದ್ದರೆ, ನಾನು ಚಡಚಣಕ್ಕೆ ಯಾಕೆ ಕಾಲೇಜು ಮಂಜೂರು ಮಾಡಿಸುತ್ತಿದೆ ಎಂಬ ಸಾಮಾನ್ಯ ಜ್ಞಾನವಾದರೂ ನನ್ನನ್ನು ಟೀಕಿಸುವವರಿಗೆ ಇರಬೇಕಿತ್ತು’ ಎಂದರು.

‘ಪದವಿ ಕಾಲೇಜು ಜೊತೆಗೆ ಚಡಚಣ ಪಟ್ಟಣದಲ್ಲಿ ಶ್ರಮಿಕ ಮಕ್ಕಳ ವಸತಿ ಶಾಲೆ, ಪೂರ್ವ ಪ್ರಾಥಮಿಕ ತರಗತಿಯಿಂದ ಪಿಯುಸಿವರೆಗೆ ಶಿಕ್ಷಣ ನೀಡುವ ಮೌಲಾನಾ ಆಜಾದ ಮಾದರಿ ಶಾಲೆ, ಸರ್ಕಾರಿ ಐಟಿಐ ಕಾಲೇಜುಗಳನ್ನು ಪ್ರಾರಂಭಿಸುತ್ತಿದ್ದೇನೆ. ಚಡಚಣ ಪಟ್ಟಣದಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಚಡಚಣದಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಹಾವಿನಾಳ ಗ್ರಾಮದ ಹತ್ತಿರ 63 ಎಕರೆ ಸರ್ಕಾರಿ ಜಮೀನಿನಲ್ಲಿ ಎಲ್ಲ ಶಾಲಾ, ಕಾಲೇಜುಗಳನ್ನು ಪ್ರಾರಂಭಿಸಿ ಎಜ್ಯೂಕೇಶನ್ ಹಬ್ ನಿರ್ಮಾಣ ಮಾಡಬೇಕು ಎಂಬುದು ನನ್ನ ಆಸೆ’ ಎಂದರು.

‘ಚಡಚಣ ಪಟ್ಟಣದಲ್ಲಿ ಕಾಲೇಜು ಪ್ರಾರಂಭಿಸಲು 5 ಎಕರೆ ಭೂಮಿಯನ್ನು ದಾನಿಗಳು ನೀಡಿದರೆ ಆ ಶಾಲೆಗೆ ಅವರ ಹಿರಿಯರ ಹೆಸರು ಇಡಲು ಸಿದ್ಧ’ ಎಂದರು.

ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ, ತಾಲ್ಲೂಕು ಪಂಚಾಯಿತಿ ಇಒ ಅಶೋಕ ರಾಠೋಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಲ್ಲು ಧೋತ್ರೆ, ಉಪಾಧ್ಯಕ್ಷ ಇಲಾಯಿ ನದಾಫ್, ಸದಸ್ಯರಾದ ಇಬ್ರಾಹಿಂ ಸೌದಾಗರ, ರಾಜು ಕೋಳಿ, ಪ್ರಕಾಶಗೌಡ ಪಾಟೀಲ, ರಾಜು ಕೋಳಿ, ಬಾಲಾಜಿ ಗಾಡಿವಡ್ಡರ ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ ಹಕ್ಕೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-26-512331964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.