ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜ್ಞಾನ ಹಾಗೂ ಶೀಲ ತಳ ಸಮುದಾಯಗಳಿಗೆ ದಾರಿದೀಪವಾಗಲಿ ಎಂದು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಡಾ.ಭೀಮರಾವ್ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ನಗರದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ ಹಮ್ಮಿಕೊಂಡಿದ್ದ ಭೀಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶೋಷಿತ ಸಮುದಾಯಗಳ ಅಭ್ಯುದಯಕ್ಕೆ ಹಾಗೂ ಸ್ವಾಭಿಮಾನದ ಬದುಕಿಗೆ ಇಡೀ ಜೀವನವನ್ನೇ ಮುಡಿಪಿಟ್ಟ ಅಂಬೇಡ್ಕರ್ ಋಣವನ್ನು ತೀರಿಸಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದರು.

ಅಂಬೇಡ್ಕರ್ ಜಯಂತಿಯಲ್ಲಿ ಅವರ ಭಾವಚಿತ್ರಗಳು ವಿಜೃಂಭಿಸುತ್ತಿವೆಯೇ ಹೊರತು ಅವರ ವಿಚಾರಧಾರೆಗಳು ಕಾಣದಿರುವುದು ಬೇಸರದ ವಿಚಾರ. ಅಂಬೇಡ್ಕರ್ ನಲಿಯಬೇಕಿರುವುದು ನೃತ್ಯಗಳಲ್ಲಿ ಅಲ್ಲ, ಫ್ಲೆಕ್ಸ್ ಬ್ಯಾನರ್ಗಳಲ್ಲಿ ಅಲ್ಲ, ನಮ್ಮೊಳಗೆ’ ಎಂದರು.

‘ತುಳಿತಕ್ಕೊಳಗದಾವರು ದೇಶವನ್ನಾಳುವ ದೊರೆಗಳಾಗಬೇಕು ಎಂದು ಅಂಬೇಡ್ಕರ್ ಕನಸು ಕಂಡಿದ್ದರು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಸಂಪೂರ್ಣ ಮಾರಾಟವಾಗಿರುವಂತೆ ಕಾಣುತ್ತಿರುವುದು ಬೇಸರದ ಸಂಗತಿ. ಮೀಸಲಾತಿಯಡಿ ನೋಟು, ಸೀಟು, ಬೂಟು, ಅಧಿಕಾರ ದಕ್ಕಿಸಿಕೊಂಡಿರುವ ನಾಯಕರು ಅಂಬೇಡ್ಕರ್ ತ್ಯಾಗ, ಬಲಿದಾನವನ್ನು ಸ್ಮರಿಸಬೇಕು’ ಎಂದರು.

‘ಅಂಬೇಡ್ಕರ್ ಜೀವಂತವಾಗಿರುವುದು ಶಿಕ್ಷಣದಲ್ಲಿ ಎಂಬ ಸತ್ಯವನ್ನು ಅರಿಯಬೇಕು, ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದರೆ ಉನ್ನತ ಹುದ್ದೆಗಳನ್ನು ಅಲಂಕರಿಸಲಿದ್ದಾರೆ, ಸಮುದಾಯ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತದೆ’ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಸಲಹೆ ನೀಡಿದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಆರ್.ಮಹೇಂದ್ರವಾಸ್, ಹನಸೋಗೆ ಸೋಮಶೇಖರ್ ಮತ್ತು ಆರ್.ರವಿಕುಮಾರ್ ತಂಡದವರಿಂದ ಭೀಮ ಗಾನೋತ್ಸವ ಕಾರ್ಯಕ್ರಮ ನಡೆಯಿತು.

ನಗರಸಭಾ ಮಾಜಿ ಅಧ್ಯಕ್ಷ ರಾಜಪ್ಪ ಆರ್.ಎಂ, ಉದ್ಯಮಿ ಎಸ್ಪಿಕೆ ಉಮೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕ್ ಸಿ, ಬೋಗಾಪುರ ವಸತಿಯುತ ಸಕಾ೯ರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪಿ.ದೇವರಾಜು, ನಗರಸಭೆ ಆಯುಕ್ತ ಪರಶುರಾಮ ಛಲವಾದಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ, ಉದ್ಯಮಿ ಮಹೇಶ್ ಕುದರ್, ಮೋಹನಾಂಬ, ಡಾ.ಭೀಮ್ ರಾವ್ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಮಹದೇವಯ್ಯ ಸೇರಿದಂತೆ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-37-572900174

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.