ಚಾಮರಾಜನಗರ: ನಗರದ ರಾಮಸಮುದ್ರದಲ್ಲಿರುವ ಕ್ರಿಸ್ತರಾಜ ಬಾಲರ ಪಟ್ಟಣ ವಿದ್ಯಾಸಂಸ್ಥೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುನಮನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಈಚೆಗೆ ನಡೆಯಿತು.

2003-2004ನೇ ಸಾಲಿನಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಗಳು 23 ವರ್ಷಗಳ ಬಳಿಕ ಒಗ್ಗೂಡಿ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಈ ಸಂದರ್ಭ ಶಾಲೆಯ ಶಿಕ್ಷಕರಿಗೆ ಸನ್ಮಾನಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ಸುಜಯ್ ಕುಮಾರ್, ಸಹ ಶಿಕ್ಷಕರಾದ ಎನ್.ಎಸ್.ಪುಟ್ಟೀರಪ್ಪ, ಆರ್.ಪಿ.ನಿರಂಜನ್, ನಿರ್ಮಲಾ ಮೇರಿ, ಸರ್ವಮಂಗಳ, ಎಲೆಜಬಲ್ ಮರ್ಸಿ, ಸವಿತಾ, ನಾಗರಾಜು, ಪ್ರಾನ್ಸಿಸ್ ಬಾಬು, ನರಸಿಂಹಯ್ಯ, ಫಿಲೋಮಿನಾ, ಚಿನ್ನಯ್ಯ, ಲೂರ್ದ್ ಮೇರಿ, ನಟರಾಜು, ಯೋಸೆಫ್, ಜೋಸೆಫ್, ಸಿಂದಿಯಾ, ಶಿವನಂಜಯ್ಯ, ಮೂರ್ತಿ, ಲಕ್ಷ್ಮಯ್ಯ, ಸೆಲ್ವಮೇರಿ, ತೆರೆಸಾ ಪುಷ್ಪಾ, ಶಾಂತಿ, ಮೇರಿ, ಶಾಲೆಯ ಸಿಬ್ಬಂದಿ ಡ್ಯಾನಿಯಲ್, ನಾಗರಾಜು, ದೊರೆ ಅವರಿಗೆ ಗೌರವ ಸಲ್ಲಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ಜೋಸೆಫ್ ರಾಜು ಮಾತನಾಡಿ, ಗುರುವಂದನಾ ಕಾರ್ಯಕ್ರಮ ಅಯೋಜನೆ ಮಾಡಿರುವುದು ಗುರುಗಳ ಮೇಲೆ ವಿದ್ಯಾರ್ಥಿಗಳಿಗೆ ಇರುವ ಪ್ರೀತಿ, ವಿಶ್ವಾಸ, ಗೌರವದ ಪ್ರತೀಕವಾಗಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಸಾಧನೆಯ ಹಾದಿಯಲ್ಲಿ ಬದುಕುತ್ತಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಕಂಡು ಸಂತಸವಾಗಿದೆ ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಸುಜಯ್ ಕುಮಾರ್ ಮಾತನಾಡಿದರು, ಬ್ರದರ್ ಜಾನ್ ಪೀಟರ್, ಚಾಲ್ಸ್ ಶುಭ ಕೋರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-37-1721004356

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.