ಚಾಮರಾಜನಗರ: ಭಾರತದ ಗುರು ಪರಂಪರೆ ಜಗತ್ತಿಗೆ ಮಾದರಿಯಾಗಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರ, ಪರಂಪರೆ, ಆತ್ಮವಿಶ್ವಾಸ, ಜೀವನ ಮೌಲ್ಯಗಳನ್ನು ಬೋಧಿಸಲಾಗುತ್ತದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.

ಹರದನಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 1999ರಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹರದನಹಳ್ಳಿ ಗ್ರಾಮ ಐತಿಹಾಸಿಕ, ಪೌರಾಣಿಕ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಸಾಂಸ್ಕೃತಿಕ ಮೌಲ್ಯ, ಗುರುಪರಂಪರೆ ಹಾಗೂ ಭಕ್ತಿ ಹಾಸುಹೊಕ್ಕಾಗಿದೆ. ದಿವ್ಯಲಿಂಗೇಶ್ವರ, ವೇಣುಗೋಪಾಲ ಸ್ವಾಮಿ, ಆಂಜನೇಯ, ಯಡಿಯೂರು ಸಿದ್ದಲಿಂಗೇಶ್ವರರ ಗುರು ಪರಂಪರೆ ಇದ್ದು,ಈ ನೆಲದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ನಾಡಿನ ಹಲವೆಡೆ ಉತ್ತಮ ಬದುಕು ಕಟ್ಟಿಕೊಂಡಿರುವುದು ವಿವಿಧ ವೃತ್ತಿಗಳನ್ನು ತೊಡಗಿಸಿಕೊಂಡಿರುವುದು ಅಭಿನಂದನಾರ್ಹ. ಕಲಿತ ಶಾಲೆಯ ಶಿಕ್ಷಕರನ್ನು ವಿವಿಧ ಭಾಗಗಳಿಂದ ಕರೆತಂದು ಗೌರವಿಸುತ್ತಿರುವುದು ಉತ್ತಮ ಕಾರ್ಯ ಎಂದರು.

ಶಿಕ್ಷಣ ಪಡೆಯುವುದೇ ಜೀವನದ ಪ್ರಮುಖ ಉದ್ದೇಶವಲ್ಲ; ಪ್ರೀತಿ, ಸ್ನೇಹ ಸಂಪಾದಿಸುವುದು, ಗುರು ಪರಂಪರೆಯನ್ನು ಗೌರವಿಸಬೇಕು. ಪ್ರೀತಿ, ಕರುಣೆ, ವಿಶ್ವಾಸ, ನಂಬಿಕೆ, ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು, ಬಾಲ್ಯದ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿ ಮುಂದುವರಿಸಬೇಕು, ಗುರು ಹಿರಿಯರನ್ನು ಗೌರವಿಸುವುದರ ಜೊತೆಗೆ ಕೌಟುಂಬಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಋಗ್ವೇದಿ ಸಲಹೆ ನೀಡಿದರು.

ಹರದನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ 80 ವರ್ಷದ ವೆಂಕಟರಮಣ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಠ ಹೇಳಿಕೊಟ್ಟ ಗುರುಗಳನ್ನು ಗೌರವಿಸುವ ಕಾರ್ಯ ಮಾದರಿ ಎಂದರು.

ಚಾಮರಾಜ ನಗರದ ಡಯಟ್ ಹಿರಿಯ ಉಪನ್ಯಾಸರಾಗಿ ನಿವೃತ್ತಿ ಹೊಂದಿರುವ ಟಿ.ವಿ.ಸಿದ್ದರಾಜಾಚಾರಿ, ಶಿಕ್ಷಕ ಮಂಜುನಾಥ ಮಾತನಾಡಿದರು. ಹಿರಿಯ ಶಿಕ್ಷಕರಾದ ಹನುಮಂತ ನಾಯಕ, ಹೊಂಗನೂರು ನಂಜಯ್ಯ, ಉತ್ತುವಳ್ಳಿ ರಂಗಸ್ವಾಮಿ, ರಾಮಸಮುದ್ರದ ವೆಂಕಟೇಶ್, ಮಲ್ಲಿಕಾರ್ಜುನ್, ಜಗದೀಶ್ ಕುಮಾರ್, ಶಿಕ್ಷಕಿಯರಾದ ರಾಜೇಶ್ವರಿ, ನಾಗರತ್ನ, ಪಾರ್ವತಿ, ಪುಟ್ಟನಂಜಮ್ಮ, ನಾಗರತ್ನಮ್ಮ, ನಳಿನಿ ಅವರನ್ನು ಸನ್ಮಾನಿಸಲಾಯಿತು. ಹರದನಹಳ್ಳಿ ಲತಾ, ಬಸವರಾಜು, ವಿಶಾಲಾಕ್ಷಿ , ಲಕ್ಷಮ್ಮ, ಗಿರಿ ಗೌಡ, ಮಹೇಶ, ಇಮ್ರಾನ್ ಪಾಷಾ, ಜಹೀರ್, ಸುಜಾತಾ, ಮಮತಾ, ಲಕ್ಷ್ಮಮ್ಮ, ಭಾನುಮತಿ, ರಂಗಪ್ಪ, ಸುರೇಶ ಸೇರಿದಂತೆ ಹಲವು ಹಿರಿಯ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-37-1774028103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.