ಚಾಮರಾಜನಗರ: ‘ಶತಮಾನ ಕಂಡ ಶಾಲೆಗಳಲ್ಲಿ ಜಿಲ್ಲೆಗೆ ಒಂದರಂತೆ 31 ಶಾಲೆಗಳನ್ನು ಪಾರಂಪರಿಕ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕನ್ನಡ ಮಾಧ್ಯಮ ಶಾಲೆಗಳ ಉಳಿವು ಕುರಿತು ಇಲ್ಲಿ ನಡೆದ ಸಭೆಯಲ್ಲಿ ಅವರು, ‘ಗಾಂಧೀಜಿ ಭೇಟಿ ನೀಡಿದ್ದ ಶಾಲೆ, ವಿಶ್ವೇಶ್ವರಯ್ಯ, ಕುವೆಂಪು ಓದಿದ ಶಾಲೆ, ಕನ್ನಡ ಭಾಷೆಯನ್ನು ಬೆಳೆಸಿದ ಮಹನೀಯರು, ವಿಜ್ಞಾನಿಗಳು ಓದಿದ ಶಾಲೆಗಳನ್ನು ಆಯ್ಕೆ ಮಾಡುವಂತೆ ಗಮನ ಸೆಳೆಯಲಾಗಿದೆ’ ಎಂದರು.

‘ರಾಜ್ಯದಲ್ಲಿ 290 ಭಾಷೆಗಳು ಬಳಕೆಯಲ್ಲಿವೆ. 27 ಭಾಷೆಗಳನ್ನು 15 ಸಾವಿರಕ್ಕೂ ಹೆಚ್ಚು ಜನ ಬಳಸುತ್ತಾರೆ. ಹಿಂದಿ ಭಾಷೆ ಕಲಿಕೆಗೆ ನೀಡುವ ಆದ್ಯತೆಯನ್ನು ಈ ಭಾಷೆಗಳ ಕಲಿಕೆಗೂ ನೀಡಬೇಕು. ಕರಾವಳಿ ಭಾಗದ ಕೆಲ ಶಾಲೆಗಳಲ್ಲಿ ಕೊರಗ, ತುಳು ಭಾಷೆ, ಕೊಡಗಿನ ಕೆಲ ಶಾಲೆಗಳಲ್ಲಿ ಕೊಡವ ಭಾಷೆ, ಹೀಗೆ ಆಯಾ ಪ್ರಾಂತ್ಯದ ಆಡುಭಾಷೆ ಕಲಿಕೆಗೆ ಆದ್ಯತೆ ನೀಡಿದರೆ ಬಹುದೊಡ್ಡ ಸಾಂಸ್ಕೃತಿಕ ಕ್ರಾಂತಿ ಮಾಡಬಹುದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1845640432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.