ಚಾಮರಾಜನಗರ: ‘ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪೂರಕ ಅಂಶಗಳನ್ನು ರಾಜ್ಯ ಶಿಕ್ಷಣ ನೀತಿಯಲ್ಲಿ ಅಡಕಗೊಳಿಸಲು 1,500 ಪುಟಗಳ ಎರಡು ವರದಿಗಳು ಸರ್ಕಾರದ ಮುಂದಿದೆ’ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ನಗರದ ದೀನಬಂಧು ಸಂಸ್ಥೆಯಲ್ಲಿ ಬುಧವಾರ 2019-20ರಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತನೆಗೊಂಡ ಶಾಲೆಗಳ ಪರಿಸ್ಥಿತಿ ಹಾಗೂ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಪ್ರಾವೀಣ್ಯ ಕುರಿತು ದೀನಬಂಧು ಸಂಸ್ಥೆ ನಡೆಸಿರುವ ಅಧ್ಯಯನ ವರದಿ ಸ್ವೀಕರಿಸಿ ಅವರು ಮಾತನಾಡಿದರು.

ಇಂಗ್ಲೀಷ್ ಮಾಧ್ಯಮಕ್ಕೆ ಪರಿವರ್ತನೆಗೊಂಡ ಶಾಲೆಗಳ ವಿದ್ಯಾರ್ಥಿಗಳ ಇಂಗ್ಲೀಷ್ ಭಾಷೆ ಹೇಗಿದೆ ಎಂದು ತಿಳಿಸುವ ಅಧ್ಯಯನ ವರದಿಯನ್ನು ಜಿಲ್ಲಾ ಸ್ವಯಂ ಸೇವೆಗಳ ಒಕ್ಕೂಟ ಹಾಗೂ ಧೀನಬಂಧು ಸಂಸ್ಥೆ ನೀಡಿದ್ದು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್.ಜಯದೇವ ಮಾತನಾಡಿ, ಶಿಕ್ಷಣ ತಜ್ಞ ರಾಮಕೃಷ್ಣ, ಕೇತನ್ ಹಾಗೂ ಹಲವು ಪರಿಣಿತರ ಸಹಯೋಗದಲ್ಲಿ 7 ವರ್ಷ ಅಧ್ಯಯನ ಮಾಡಿ ವಸ್ತುಸ್ಥಿತಿಯ ವರದಿ ಸಿದ್ದಪಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಆಲಿಸುವ ಅವಕಾಶವೇ ಇಲ್ಲದಿರುವುದು, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆ ಕಲಿಸುವ ಶಿಕ್ಷಕರಿಗೇ ಇಂಗ್ಲೀಷ್ ಬಾರದಿರುವುದು ಅಧ್ಯಯನದ ವೇಳೆ ಕಂಡು ಬಂದಿದೆ ಎಂದರು.

ಪೋಷಕರ ಒತ್ತಾಯಕ್ಕೆ ಮಣಿದು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಮುಚ್ಚಿ ಇಂಗ್ಲೀಷ್ ಮಾಧ್ಯಮ ತೆರೆಯಲಾಗುತ್ತಿದೆ. 7 ವರ್ಷಗಳ ಹಿಂದೆ ಜಿಲ್ಲೆಯ 20 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗಿದ್ದು, ಇಂಗ್ಲೀಷ್ ಆಲಿಸುವ, ಸಂಭಾಷಿಸುವ, ಸಾಂಧರ್ಭಿಕ ಕಲಿಕೆಯ ವಾತಾವರಣವೂ ಶಾಲೆಗಳಲ್ಲಿ ಇಲ್ಲ ಎಂದು ವಾಸ್ತವ ತೆರೆದಿಟ್ಟರು.

ಇಂಗ್ಲಿಷ್ ಮಾಧ್ಯಮ ಕಲಿಸುವ ಹಠದಲ್ಲಿ ಮಕ್ಕಳು ಪರಿಪೂರ್ಣವಾಗಿ ಇಂಗ್ಲಿಷ್ ಭಾಷೆಯನ್ನಾಗಲಿ, ಕನ್ನಡ ಭಾಷೆಯನ್ನಾಗಲಿ ಕಲಿಯಲು ಸಾಧ್ಯವಾಗಿಲ್ಲ. ಸರ್ಕಾರಗಳ ಹುಚ್ಚು ನಿರ್ಧಾರಗಳು ರಾಜ್ಯದಲ್ಲಿ ಭಾಷಾ ಬಡತನಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಪ್ರೊ.ಜಯದೇವ್ ವಿಷಾದ ವ್ಯಕ್ತಪಡಿಸಿದರು.

ಗೊಂದಲಕಾರಿ ಪರಿಸ್ಥಿತಿಗೆ ಸಿಲುಕಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸುಲಲಿತವಾಗಿ ಭಾವನೆಗಳನ್ನು ಅಭಿವ್ಯಕ್ತಗೊಳಿಸಲಾಗದ ಹಂತ ತಲುಪಲಿದ್ದಾರೆ. ಯುವಜನತೆಯ ಮಾನಸಿಕ ಸ್ಥಿತಿ ಹದಗೆಡುವ, ಸಾತ್ವಿಕ ಸಂಬಂಧಗಳು ಮರೆಯಾಗಿ ವಿಧ್ವಂಸಕತೆ ಹೆಚ್ಚಾಗುವ ಅಪಾಯ ಇದೆ. ಈ ಸಮಸ್ಯೆಗೆ ಪರಿಹಾರವಾಗಿ ಕನಿಷ್ಠ 7ನೇ ತರಗತಿಯವರೆಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ದೊರೆಯಬೇಕು ಎಂದರು.

ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕಾದ ತುರ್ತು ಇರುವುದರಿಂದ ದೀನಬಂಧು ಸಂಸ್ಥೆ ಅಧ್ಯಯನ ವರದಿಯನ್ನು ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಮೂಲಕ ಸರ್ಕಾರಕ್ಕೆ ಸಲ್ಲಿಸಿದೆ. ಕನ್ನಡ ಮಾಧ್ಯಮ ಕಲಿಕೆಯ ಮಹತ್ವದ ಕುರಿತು ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜನಜಾಗೃತಿ ಮೂಡಿಸಲಿದೆ ಎಂದು ಜಯದೇವ್ ತಿಳಿಸಿದರು.

ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯದಿದ್ದರೆ ಸೃಜನಶೀಲತೆ ಕಳೆದುಹೋಗುತ್ತದೆ, ಮನುಷ್ಯ ಸಂಬಂಧಗಳು ಸಡಿಲಗೊಳ್ಳುತ್ತವೆ. ಭಾಷೆ ಉಳಿದರೆ ಮಾತ್ರ ನೆಲದ ಸಂಸ್ಕೃತಿ ಉಳಿಯುತ್ತದೆ ಎಂಬ ಅರಿವು ನಮ್ಮೊಳಗಿರಬೇಕು ಎಂದು ಎಚ್ಚರಿಸಿದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಸಾಹಿತಿ ಹನೂರು ಕೃಷ್ಣಮೂರ್ತಿ, ಒ.ಎಲ್.ನಾಗಭೂಷಣ ಸ್ವಾಮಿ, ಜಿ.ಪಿ.ಬಸವರಾಜು, ಕೆ. ವೆಂಕಟರಾಜು, ಶಿವಸ್ವಾಮಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-37-134736702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.