ಚಾಮರಾಜನಗರ: ‘ಖಾಸಗಿ ಶಾಲೆಗಳು ಹಣ ಮಾಡುವ ವ್ಯವಹಾರ ಕೇಂದ್ರಗಳಾಗಿ ಬದಲಾಗಿದ್ದು ಶಿಕ್ಷಣ ಸಂಪೂರ್ಣವಾಗಿ ಹಿನ್ನೆಲೆಗೆ ಸರಿದಿದೆ’ ಎಂದು ರಂಗಕರ್ಮಿ ಎಚ್.ಜನಾರ್ದನ್ (ಜನ್ನಿ) ಬೇಸರ ವ್ಯಕ್ತಪಡಿಸಿದರು.

ಅಭ್ಯಾಸಿ ಟ್ರಸ್ಟ್ ವತಿಯಿಂದ ಭಾನುವಾರ ನಗರದ ಡಾ.ರಾಜ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಹಟ್ಟಿ ಹೈಕಳ ಜಗುಲಿ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘10–15 ಅಂತಸ್ತಿನ ಬೃಹತ್ ಶಾಲಾ ಕಟ್ಟಡಗಳು ಭಯ ಹುಟ್ಟಿಸುತ್ತವೆ, ಶಿಕ್ಷಣ ಸಂಪೂರ್ಣವಾಗಿ ಉದ್ಯಮವಾಗಿ ಬದಲಾಗಿದೆ. ಪರಿಸರ ರಕ್ಷಣೆ, ಮಾನವೀಯ ಮೌಲ್ಯ, ಸಂಬಂಧಗಳ ಬೆಲೆ ಸಹಿತ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣ ಮರೆಯಾಗುತ್ತಿದೆ.

ಸಮಾಜದಲ್ಲಿ ಪ್ರಶ್ನೆ ಮಾಡುವ, ವೈಜ್ಞಾನಿಕ ಮನೋಭಾವ ಹೆಚ್ಚಿಸುವ ವಿಚಾರಗಳಿಗೆ ಶಾಲೆಗಳಲ್ಲಿ ಆದ್ಯತೆ ಕೊಡುತ್ತಿಲ್ಲ, ಮಗು ಸಂಪೂರ್ಣವಾಗಿ ತೆರೆದುಕೊಳ್ಳಲು ಸಾಧ್ಯವಾಗದ ವಾತಾ ವರಣ ನಿರ್ಮಾಣ ಮಾಡಲಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಸತ್ಯ, ನಿಷ್ಠೆ, ಸಮಾನತೆ, ಸಂಸ್ಕೃತಿ, ಸಾಧನೆಯ ಪ್ರಜ್ಞೆಯಾಗಿರುವ ಮಲೆ ಮಹದೇಶ್ವರ, ಮಂಟೇಸ್ವಾಮಿಯ ವಿಚಾರ ಧಾರೆಗಳು ಶಿಕ್ಷಣದಲ್ಲಿ ಅಡಕವಾಗಬೇಕು. ಶಿಕ್ಷಣ, ಪಠ್ಯಪುಸ್ತಕ, ಅಂಕಗಳಿಕೆಯ ಹೆಸರಿನಲ್ಲಿ ಮಕ್ಕಳನ್ನು ಕಟ್ಟಿಹಾಕುವ ಬದಲು ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಬೇಸಗೆ ಶಿಬಿರಗಳಲ್ಲಿ ಭಾಗವಹಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಮಕ್ಕಳಲ್ಲಿ ಸೃಜನಶೀಲತೆ, ಸಾಂಸ್ಕೃತಿಕ ಪ್ರಜ್ಞೆ ಬೆಳೆಸಬೇಕು, ನೆಲೆ, ಜಲ, ಭಾಷೆ, ಭಾವ, ಪರಿಸರದ ಬಗ್ಗೆ ಅಭಿಮಾನ ತುಂಬಬೇಕು, ಮೌಢ್ಯ, ಕಂದಾಚಾರಗಳನ್ನು ತೊಲಗಿಸಿ ವೈಜ್ಞಾನಿಕ ಮನೋಭಾವ ರೂಢಿಸಬೇಕು, ಜ್ಞಾನದ ಹರಿವು ಹೆಚ್ಚಾಗಬೇಕು ಎಂದು ಜನಾರ್ದನ್ ಅಭಿಪ್ರಾಯಪಟ್ಟರು.

ಹಟ್ಟಿ ಹೈಕಳ ಜಗುಲಿ ಬೇಸಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳು ನೃತ್ಯ ಪ್ರದರ್ಶನದ ಮೂಲಕ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಶಿಬಿರದದಲ್ಲಿ ಜವಳಿ ವರ್ತಕರ ಸಂಘದ ಅಧ್ಯಕ್ಷ ಬಿ.ವಿ.ವೆಂಕಟನಾಗಪ್ಪ ಶೆಟ್ಟಿ, ಸಾಹಿತಿ ಪಿ.ನಾಗರತ್ನಮ್ಮ, ಹೊಂಗಸಂದ್ರದ ಅಬಕಾರಿ ಅಧಿಕ್ಷಕ ಎಸ್.ಎಂ.ಮಹೇಶ್, ಪ್ರಾಧಿಕಾರದ ಸದಸ್ಯ ಎಸ್.ರಾಜು, ಉಪನ್ಯಾಸಕ ಮೋಹನ್ ಕುಮಾರ್, ಸಂಗೀತ ವಿದ್ವಾಂಸ ಕಿರಗಸೂರು ರಾಜಪ್ಪ, ಜಾಯ್ಫುಲ್ ಜಯಶೇಖರ್,, ತಬಲ ವಾದಕ ವಿದ್ವಾನ್ ರಘುನಾಥ್, ನಿರ್ದೇಶಕ ಕಿರಣ್ ಗಿರ್ಗಿ, ಸಂಚಾಲಕಿ ನಂದಿನಿ ರವಿಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-37-257621323

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.