ಚಾಮರಾಜನಗರ: ‘ಬೇಸಿಗೆ ಶಿಬಿರಗಳು ಮಕ್ಕಳ ಸೃಜನಾತ್ಮಕ ಕಲಿಕೆಗೆ ಹಾಗೂ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತವಾದ ವೇದಿಕೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಅಭಿಪ್ರಾಯಪಟ್ಟರು.

ನಗದ ಜಿಲ್ಲಾ ಪೊಲೀಸ್ ಭವನದಲ್ಲಿ ಬುಧವಾರ ಪೊಲೀಸರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ‘ಪ್ರತಿಭೆ ಇದ್ದರೂ ವೇದಿಕೆ ಸಿಗದೆ ಬಹಳಷ್ಟು ಮಕ್ಕಳು ಶಾಲೆಯಲ್ಲಿ ಪಠ್ಯ ಕಲಿಕೆ ಹಾಗೂ ಅಂಕ ಗಳಿಕೆಗಷ್ಟೆ ಸೀಮಿತವಾಗಿಬಿಡುತ್ತಾರೆ. ಆದರೆ, ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರೆ ಮಕ್ಕಳ ಆಸಕ್ತಿ ಹಾಗೂ ಪ್ರತಿಭೆ ಅರಿಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

‘ಶಿಬಿರದಲ್ಲಿ ಮಕ್ಕಳು ಚಿತ್ರಕಲೆ, ಹಾಡುಗಾರಿಕೆ, ಜನಪದ ಕಲೆಗಳನ್ನು ಪ್ರದರ್ಶಿಸಿದ್ದು ಖುಷಿಯ ವಿಚಾರ. ಆಚಾರ–ವಿಚಾರ, ಸಂಸ್ಕೃತಿಯ ಕಲಿಕೆಗೂ ಶಿಬಿರ ಸಹಕಾರಿಯಾಗಿದೆ’ ಎಂದು ಮುತ್ತುರಾಜ್ ಹೇಳಿದರು.

‘ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸಲು ಹಿಂದೇಟು ಹಾಕುತ್ತಾರೆ. ಈ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಬೇಸಗೆ ಶಿಬಿರ ಆಯೋಜಿಸಲಾಗಿತ್ತು. ಮಕ್ಕಳು ರಜೆಯನ್ನು ಮನರಂಜನೆಯ ಜೊತೆಗೆ ವಿಭಿನ್ನ ಕಲಿಕೆಯೊಂದಿಗೆ ಕಳೆದಿದ್ದಾರೆ’ ಎಂದರು.

‘ಅತಿಯಾದ ಮೊಬೈಲ್ ಬಳಕೆ ಮಕ್ಕಳ ವರ್ತನೆಯಲ್ಲಿ ಆತಂಕಕಾರಿ ಬದಲಾವಣೆಗಳಿಗೆ ಕಾರಣವಾಗುತ್ತಿದ್ದು, ಪೋಷಕರ ಹಾಗೂ ಸಂಬಂಧಿಗಳ ನಡುವೆ ಮಕ್ಕಳ ಸಂಬಂಧ ಸಡಿಲಗೊಳ್ಳುತ್ತಿವೆ, ಇಂಟರ್ನೆಟ್ಗಳಲ್ಲಿ ಗೇಮ್ಸ್ಗಳನ್ನು ಆಡುವುದರಿಂದ ಮೊಬೈಲ್ ಚಟ ಹೆಚ್ಚಾಗಿ ಮನಸ್ಸಿನ ಮೇಲೆ ತೀವ್ರ ಒತ್ತಡ ಬೀಳುತ್ತಿದ್ದು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ’ ಎಂದು ಹೇಳಿದರು.

‘ಪೋಷಕರು ಮಕ್ಕಳನ್ನು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದ ದೂರವಿರಿಸಬೇಕು, ತಂತ್ರಜ್ಞಾನ ಕಲಿಕೆಗಷ್ಟೆ ಸೀಮಿತವಾಗಬೇಕು, ಮಕ್ಕಳ ದಿನನಿತ್ಯದ ಚಟುವಟಿಕೆಗಳ ಮೇಲೆ ಸೂಕ್ಷ್ಮವಾಗಿ ನಿಗಾ ಇರಿಸಬೇಕು’ ಎಂದು ಎಸ್ಪಿ ಕಿವಿಮಾತು ಹೇಳಿದರು.

ಶಿಬಿರದಲ್ಲಿ 60 ಮಕ್ಕಳು ಭಾಗವಹಿಸಿದ್ದು ಜನಪದ ಕಲಾವಿದ ಕಿರಣ್ ಗಿರ್ಗಿ ನೇತೃತ್ವದಲ್ಲಿ ರಂಗ ಕಲೆಗಳನ್ನು ಕಲಿತು ಪ್ರದರ್ಶಿಸಿ ಸಂಭ್ರಮಿಸಿದ್ದಾರೆ. ಇಂತಹ ಶಿಬಿರಗಳು ನಿರಂತರವಾಗಿ ನಡೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಸ್ನೇಹಾರಾಜ್ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿಎಆರ್ ಡಿವೈಎಸ್ಪಿ ಸೋಮಣ್ಣ, ಡಿಆರ್ ಇನ್ಸ್ಪೆಕ್ಟರ್ ಸತೀಶ್, ಕಲಾವಿದ ಕಿರಣ್ ಗಿರ್ಗಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-37-415730984

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.