ಚಾಮರಾಜನಗರ: ಅಭ್ಯಾಸಿ ಟ್ರಸ್ಟ್ ವತಿಯಿಂದ ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿರುವ ‘ಹಟ್ಟಿ ಹೈಕಳ ಜಗುಲಿ-ಮಕ್ಕಳ ಬೇಸಿಗೆ ಶಿಬಿರ’ವನ್ನು ತಮಟೆ ಬಾರಿಸಿ ಯಳಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಆರ್.ನಂಜುಂಡಯ್ಯ ಉದ್ಘಾಟಿಸಿದರು.

ಬಳಿಕ ಮಾತನಾಡಿ ‘ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಹಾಗೂ ಕಲಿಕೆಗೆ ಉತ್ತಮ ವೇದಿಕೆಯಾಗಲಿದೆ. ಗ್ರಾಮೀಣ ಭಾಗದ ಮಕ್ಕಳು ಆರ್ಥಿಕವಾಗಿ ಬಡವರಾಗಿದ್ದರೂ ಪ್ರತಿಭೆಯಲ್ಲಿ ಶ್ರೀಮಂತರಾಗಿದ್ದು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಬಿರದಲ್ಲಿ ಮಕ್ಕಳ ಕುತೂಹಲ ತಣಿಸುವ, ಪ್ರಶ್ನಿಸುವ ಮನೋಭಾವ ಬೆಳೆಸುವ ಕೆಲಸ ಆಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ.ಎಂ.ನಾಗಮಲ್ಲಪ್ಪ ಮಾತನಾಡಿ, ರಂಗ ಶಿಬಿರಗಳಿಂದ ಸಹಬಾಳ್ವೆ, ಪರಸ್ಪರ ಹೊಂದಾಣಿಕೆಯ ಕಲಿಕೆ ಸಾಧ್ಯವಾಗಲಿದೆ. ಸಾಮಾಜಿಕ ಮೌಲ್ಯಗಳು ಮೈಗೂಡುತ್ತವೆ. ನಾಗಾಲೋಟದಂತೆ ಸಾಗುತ್ತಿರುವ ಜೀವನಕ್ರಮ ಮತ್ತು ತಂತ್ರಜ್ಞಾನದ ಯುಗದಲ್ಲಿ ಮಕ್ಕಳಿಗೆ ಹಳ್ಳಿ ಸಂಸ್ಕೃತಿಯನ್ನು ಪರಿಚಯಿಸುತ್ತಿರುವ ಇಂತಹ ಶಿಬಿರಗಳು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.

ಶಿಬಿರದ ನಿರ್ದೇಶಕ ಹಾಗೂ ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ ಮಾತನಾಡಿ, ಹಟ್ಟಿ ಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರ 1 ತಿಂಗಳು ನಡೆಯಲಿದ್ದು ನಾಟಕ ಅಭಿನಯ, ಸಂಗೀತ, ಚಿತ್ರಕಲೆ, ಕರಕುಶಲತೆ, ಮಕ್ಕಳ ಸಂತೆ, ಪ್ರವಾಸ, ರಂಗಾಟ, ಮಕ್ಕಳ ಸಿನಿಮಾ, ಮುಖವರ್ಣಿಕೆ, ಗೊಂಬೆ ತಯಾರಿ, ಉರಗ ಪ್ರಾತ್ಯಕ್ಷಿಕೆ ಸಹಿತ ಹಲವು ಚಟುವಟಿಕೆಗಳ ಕುರಿತು ತರಬೇತಿ ನೀಡಲಾಗುವುದು. ಶಿಬಿರದ ಕೊನೆಯ ದಿನ ಜಿಲ್ಲಾ ರಂಗಮಂದಿರದಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ಮತ್ತು ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.

ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆಯ ವಲಯ ಅಧ್ಯಕ್ಷ ರೆವರೆಂಡ್ ಪ್ರಕಾಶ್ ದಾಸರ್ ಮಾತನಾಡಿದರು. ಪ್ರಾಧಿಕಾರ ಸದಸ್ಯ ರಾಜು ಎಸ್, ಶಿಬಿರದ ಸಂಚಾಲಕಿ ನಂದಿನಿ ರವಿಕುಮಾರ್, ಗಾಯಕ ಯಡಿಯೂರು ನಾಗರಾಜ್, ಮಹಮ್ಮದ್ ಗೌಸ್, ಶಿಕ್ಷಕ ಮಹೇಂದ್ರ, ಶಿಬಿರದ ಮಕ್ಕಳು ಹಾಗೂ ಪೋಷಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-37-957576790

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.