ಚನ್ನಪಟ್ಟಣ: ತಾಲ್ಲೂಕಿನ ಕಣ್ವ ಜಲಾಶಯ ಬಳಿಯ ಪ್ರವಾಸಿ ಮಂದಿರದಲ್ಲಿ ಗೆಳೆಯರ ಬಳಗದ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜಯಂತಿ ಸೋಮವಾರ ಆಯೋಜಿಸಲಾಗಿತ್ತು. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ನಿವೃತ್ತ ಸೈನಿಕ ರಾಜಶೇಖರ್ ಮಾತನಾಡಿ, ‘ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಅವರ ಪತ್ನಿ ಸಾವಿತ್ರಿಬಾಯಿ ಫುಲೆ ಅವರು ದೇಶದ ಶೋಷಿತ ಸಮುದಾಯಗಳಿಗೆ ವಿದ್ಯೆಯನ್ನು ನೀಡುವ ಮೂಲಕ ಅವರ ಬದುಕಿನಲ್ಲಿ ಬೆಳಕು ತುಂಬಿದರು. ಅವರ ಪ್ರಯತ್ನದಿಂದಾಗಿಯೇ ದೇಶದ ಎಲ್ಲರೂ ಅಕ್ಷರ ಕಲಿಯಲು ಸಾಧ್ಯವಾಗಿದೆ. ಅಂತಹ ಮಹಾನ್ ವ್ಯಕ್ತಿ ಜಯಂತಿ ಆಚರಣೆ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ’ ಎಂದರು.

ಸಮತಾ ಸೈನಿಕ ದಳದ ರಾಮನಗರ ಘಟಕದ ಅಧ್ಯಕ್ಷ ಎಸ್.ವಿನೋದ್ ರಾಜ್ ಮಾತನಾಡಿ, ‘ಜ್ಯೋತಿ ಬಾಯಿ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಅವರ ಸ್ವಾಭಿಮಾನ ಮತ್ತು ಬದ್ಧತೆಯಿಂದಾಗಿಯೇ ದೇಶದಲ್ಲಿ ಅಕ್ಷರ ಕ್ರಾಂತಿ ಸಾಧ್ಯವಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಮತ್ತೀಕೆರೆ ಹನುಮಂತಯ್ಯ, ಲೋಕೇಶ್ ಮೌರ್ಯ, ಪ್ರಜ್ಞಾ ಸಿದ್ದರಾಮು, ದಲಿತ ಸಮುದಾಯದ ಮುಖಂಡ ಕೈಲಾಂಚ ಲೋಕೇಶ್, ಸುಬ್ರಹ್ಮಣ್ಯ, ಕೋ-ಆಪರೇಟಿವ್ ಬ್ಯಾಂಕ್ನ ಯಶವಂತಪುರ ಶಾಖೆ ವ್ಯವಸ್ಥಾಪಕ ಸಿದ್ಧರಾಜು, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಶಿವಶಂಕರ್, ಭೀಮ್ ಆರ್ಮಿಯ ಜಿಲ್ಲಾ ಉಪಾಧ್ಯಕ್ಷ ನಂಜುಂಡಪ್ಪ ಮತ್ತು ಇತರರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-14-1535209257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.