ಚೆನ್ನೈ: ಇಲ್ಲಿನ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (ಎಸಿಜೆ) ಹಾಗೂ ಮೀಡಿಯಾ ಡೆವಲಪ್ಮೆಂಟ್ ಫೌಂಡೇಷನ್ ನೀಡುವ 2025ನೇ ಸಾಲಿನ ‘ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿ’ಗೆ ಪತ್ರಕರ್ತರಾದ ಆಯುಷ್ ತಿವಾರಿ, ಜೇನ್ ಅಲ್ಕಾಜಿ ಮತ್ತು ಪತ್ರಿಕಾ ಛಾಯಾಗ್ರಾಹಕ ಸಂಖದೀಪ್ ಬ್ಯಾನರ್ಜಿ ಆಯ್ಕೆಯಾಗಿದ್ದಾರೆ.

ಮೂವರು ಸದಸ್ಯರನ್ನು ಒಳಗೊಂಡ ಸಮಿತಿಯು ಕಾಲೇಜಿನ ಕ್ಯಾಂಪಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರಕಟಿಸಿತು.

ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ‘ಎಸಿಜೆ–2025’ ಪ್ರಶಸ್ತಿಗೆ ಆಯುಷ್ ತಿವಾರಿ ಅವರು ಭಾಜನರಾಗಿದ್ದಾರೆ. ‘ಸ್ಕ್ರೋಲ್ ಡಾಟ್ ಇನ್’ನಲ್ಲಿ ಪ್ರಕಟವಾದ ‘ಭಾರತದ ಸೈಬರ್ ವಂಚನೆಯ ಪಿಡುಗು ಬಹುಕೋಟಿ ಡಾಲರ್ ಮೊತ್ತದ ಜಾಗತಿಕ ಉದ್ಯಮದ ಒಂದು ಭಾಗ’ ಎಂಬ ವಿಶೇಷ ವರದಿಗೆ ಈ ಪ್ರಶಸ್ತಿ ಸಂದಿದೆ.

ಸಾಮಾಜಿಕ ಪರಿಣಾಮ ಉಂಟು ಮಾಡಿದ ಪತ್ರಿಕೋದ್ಯಮ ವಿಭಾಗದಲ್ಲಿ ನೀಡುವ ‘ಕೆ.ಪಿ. ನಾರಾಯಣ ಕುಮಾರ್ ಸ್ಮಾರಕ ಪ್ರಶಸ್ತಿ’ಯು ಜೇನ್ ಅಲ್ಕಾಜಿ ಅವರಿಗೆ ಸಂದಿದೆ. ‘ದ ಕ್ಯಾರವಾನ್’ನಲ್ಲಿ ಪ್ರಕಟವಾದ ‘ಹಳಿಗಳ ಮೇಲೆ ನೆತ್ತರು: ಪ್ರತಿ ವರ್ಷ ರೈಲ್ವೆ ಹಳಿ ನಿರ್ವಹಣೆಯ ಸುಮಾರು 100 ಸಿಬ್ಬಂದಿ ಕೆಲಸದ ಸಮಯದಲ್ಲಿ ಏಕೆ ಸಾವಿಗೀಡಾಗುತ್ತಿದ್ದಾರೆ?’ ಎಂಬ ವಿಶೇಷ ವರದಿಗೆ ಈ ಪ್ರಶಸ್ತಿ ದೊರೆತಿದೆ.

‘ಆಶೀಷ್ ಯೆಚೂರಿ ಸ್ಮಾರಕ ಪ್ರಶಸ್ತಿ’ಯು ಪತ್ರಿಕಾ ಛಾಯಾಗ್ರಾಹಕ ಸಂಖದೀಪ್ ಬ್ಯಾನರ್ಜಿ ಅವರಿಗೆ ಸಂದಿದೆ. ‘ದ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ಪ್ರಕಟ ಗೊಂಡ ಮರಾಠಿಗರ ಪ್ರತಿಭಟನೆಯ ‘ವಿಶ್ರಾಂತಿಯಲ್ಲಿರುವ ಪ್ರತಿಭಟನಕಾರರು’ ಎಂಬ ಶೀರ್ಷಿಕೆಯ ಅವರ ಛಾಯಾಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ.

ತನಿಖಾ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ₹2 ಲಕ್ಷ ನಗದು ಮತ್ತು ಸ್ಮರಣಿಕೆ, ಸಾಮಾಜಿಕ ಪರಿಣಾಮ ಪ್ರಶಸ್ತಿ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹1 ಲಕ್ಷ ನಗದು ಮತ್ತು ಸ್ಮರಣಿಕೆ ನೀಡಲಾಗುತ್ತದೆ.

ನಿರೂಪಕಿ ಸೇವಂತಿ ನಿನಾನ್ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು ಈ ಆಯ್ಕೆಗಳನ್ನು ಮಾಡಿದೆ.

ಪತ್ರಕರ್ತೆ ನಿರುಪಮಾ ಸುಬ್ರಮಣಿಯನ್ ಮತ್ತು ಪತ್ರಿಕಾ ಛಾಯಾಗ್ರಾಹಕ ಸುಧಾರಕ್ ಓಳ್ವೆ ಸದಸ್ಯರಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-51-1696566939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.