ಚಿಕ್ಕಬಳ್ಳಾಪುರ: ‘ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಗುರಿ ಸಾಧಿಸಲು ಶ್ರಮಿಸಬೇಕು. ರಾತ್ರೋರಾತ್ರಿ ಶ್ರೀಮಂತರಾಗಲು ಸಾಧ್ಯವಿಲ್ಲ. ಎಲ್ಲದಕ್ಕೂ ಸಮಯ ಅಗತ್ಯ ಎಂದು ನಟ ‘ಡಾಲಿ’ ಧನಂಜಯ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲ್ಲೂಕಿನ ಬೀಡಗಾನಹಳ್ಳಿ ಬಳಿಯ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಐಕ್ಯ- 2026’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯ ಜೀವನದ ಪ್ರತಿ ಹಂತವೂ ಬಹುಮುಖ್ಯ. ಅದರಲ್ಲೂ ವಿದ್ಯಾರ್ಥಿ ಜೀವನ ಜೀವನದ ಅತೀ ಮುಖ್ಯ ಘಟ್ಟ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿ ಜೀವನವನ್ನು ಹೆಚ್ಚು ಅನುಭವಿಸಬೇಕು ಎಂದು ಸಲಹೆ ನೀಡಿದರು.

ನಾವು ಅಂದುಕೊಂಡಂತೆ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಎಂದಿಗೂ ಧೃತಿಗೆಡಬೇಡಿ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸೋಲನ್ನು ಅನುಭವಿಸಬೇಕು. ಸೋಲಿನ ಅನುಭವ ಆದಾಗಲೇ ಗೆಲುವಿನ ದಾರಿ ತಿಳಿಯುತ್ತದೆ. ಆದ್ದರಿಂದ, ಸೋತು ಗೆಲ್ಲೋಣ ಎಂದು ತಮ್ಮ ಜೀವನದ ಅನುಭವವನ್ನು ಹಂಚಿಕೊಂಡರು.

‘ನಾವೆಲ್ಲರೂ ಹೆಣ್ಣುಮಕ್ಕಳನ್ನು ಸದಾ ಗೌರವಿಸಬೇಕು. ಯಾಕೆಂದರೆ, ತಾಯಿ, ತಂಗಿ, ಸ್ನೇಹಿತೆ, ಮಡದಿಯಾಗಿ ನಮ್ಮನ್ನು ಸದಾ ಕಾಯುವವರು ಸ್ತ್ರೀ ಮಾತ್ರ. ಒಂದು ಸಂಸ್ಥೆಯನ್ನು ಒಬ್ಬ ಸ್ತ್ರೀ ನಡೆಸುತ್ತಿದ್ದಾರೆ ಎಂದರೆ ಆ ಸಂಸ್ಥೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದರ್ಥ ಎಂದು ಹೇಳಿದರು.

ಜೆನ್ ಜಿ ಗಾಗಿಯೇ ಮದರ್ ಪ್ರಾಮಿಸ್ ಸಿನಿಮಾ: ಇದೀಗ ಜೆನ್ ಜಿ ಜನರೇಶನ್ ಬಂದಿದೆ. ನಿಮಗಾಗಿಯೇ ‘ಮದರ್ ಪ್ರಾಮಿಸ್’ ಎಂಬ ಹೊಸ ಸಿನಿಮಾ ಮಾಡಿದ್ದೇವೆ. ಕುಟುಂಬಸ್ಥರೆಲ್ಲರೂ ಕುಳಿತು ವೀಕ್ಷಿಸುವ, ನಕ್ಕು ನಲಿಯುವ ಸಿನಿಮಾ. ಎಲ್ಲರೂ ನೋಡಿ ಆನಂದಿಸಿ ಮತ್ತು ರಂಗಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಕನ್ನಡ ಸಿನಿಮಾಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಎನ್.ಜಿ.ಐ ನಿರ್ದೇಶಕ ಎಸ್.ಜಿ.ಗೋಪಾಲಕೃಷ್ಣ, ಪ್ರಾಂಶುಪಾಲ ಜಿ.ತಿಪ್ಪೇಸ್ವಾಮಿ ಮಾತನಾಡಿದರು.

ನಾಗಾರ್ಜುನ ಎಜುಕೇಶನ್ ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾನು ಚೈತನ್ಯ ವರ್ಮಾ, ಎನ್.ಸಿ.ಎಂ.ಎಸ್ ಪ್ರಾಂಶುಪಾಲರಾದ ಆನಂದಮ್ಮ, ಕಾಲೇಜಿನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಲತಾ, ಆಡಳಿತ ಮಂಡಳಿ ವಿಭಾಗದ ಕಿಶನ್, ಶಿಬು, ಮಂಜುನಾಥ್ ಬಚ್ಚೇಗೌಡ ಹಾಗೂ ಇತರೆ ಗಣ್ಯರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-16-1775807144

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.