ಚಿಕ್ಕಬಳ್ಳಾಪುರ: ನಗರದ ಎಸ್ಜೆಸಿ ತಾಂತ್ರಿಕ ವಿದ್ಯಾಲಯದಲ್ಲಿ ‘ಅವಿನ್ಯ ಹ್ಯಾಕ ಥಾನ್-ನಾವಿನ್ಯತೆ ಮತ್ತು ಸೃಜನಶೀಲ ಪರಿಹಾರಗಳ ಕಲ್ಪನೆ’ ಎಂಬ ರಾಷ್ಟ್ರ ಮಟ್ಟದ ಹ್ಯಾಕಥಾನ್ಗೆ ಗುರುವಾರ ಚಾಲನೆ ದೊರೆಯಿತು. ಶುಕ್ರವಾರವೂ ಈ ಕಾರ್ಯಕ್ರಮ ನಡೆಯಲಿದೆ.

ಎಐ-ಚಾಲಿತ ಆರೋಗ್ಯ ರಕ್ಷಣೆ, ಇಮೇಜ್ ಪ್ರೋಸಸಿಂಗ್ ಬಳಸಿ ರೋಗ ಪತ್ತೆ, ಮಣ್ಣಿನ ಗುಣಮಟ್ಟ ಮತ್ತು ತೇವಾಂಶ ಮುನ್ಸೂಚನೆ, ನೀರಾವರಿ ವ್ಯವಸ್ಥೆಗಳು, ಇಳುವರಿ ಮುನ್ಸೂಚನೆ ಮಾದರಿಗಳು, ರೋಗ ಹರಡುವಿಕೆಗೆ ಮುನ್ಸೂಚನೆ, ವಿಶ್ಲೇಷಣೆಗಳು, ಪ್ರವಾಹ, ಭೂಕಂಪ ಮುನ್ಸೂಚನೆ ಮತ್ತಿತರ ವಿಚಾರಗಳ ಬಗ್ಗೆ ನಾವಿನ್ಯ ಮತ್ತು ತಂತ್ರಜ್ಞಾನ ಕುರಿತು ಚರ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಬಿ.ಜಿ.ಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳ 217 ತಾಂತ್ರಿಕ ಸಂಸ್ಥೆಗಳ ವಿದ್ಯಾರ್ಥಿಗಳು ಹ್ಯಾಕಥಾನ್ನಲ್ಲಿ ಭಾಗವಹಿಸಿದ್ದಾರೆ. ತಮ್ಮ ನವೀನ ಅನ್ವೇಷಣೆಗಳನ್ನು ಪ್ರದರ್ಶಿಸಿದರು. ವಿಜೇತ ತಂಡಗಳಿಗೆ ₹ 3 ಲಕ್ಷ ಬಹುಮಾನ ನೀಡಲಾಗುತ್ತದೆ.

ಟೆಸ್ಟ್ ಯಂತ್ರ ಸಾಫ್ಟ್ವೇರ್ ಸಲ್ಯೂಷನ್ಸ್ ಮುಖ್ಯ ಆಡಳಿತಾಧಿಕಾರಿ ಗಿರೀಶ್ ರಾಮಣ್ಣ ಮಾತನಾಡಿ, ಎಐ ತಂತ್ರಜ್ಞಾನ ಬಳಕೆಯು ಪ್ರಸ್ತುತ ವಿದ್ಯಮಾನಗಳಿಗೆ ಪೂರಕವಾಗುವ ಪರಿಕರಗಳನ್ನು ನೀಡುತ್ತದೆ ಎಂದರು.

ಪ್ರಾಂಶುಪಾಲ ಜಿ.ಟಿ ರಾಜು ಮಾತನಾಡಿದರು. ಎಸ್ಜೆಸಿಐಟಿಯ ಅಂತರಿಕ್ಷಯಾನ ವಿಭಾಗದ ಮುಖ್ಯಸ್ಥ ಮಧುಸೂದನ್ ಎಸ್.ವಿ, ಗಣಕಯಂತ್ರ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ವಿಕಾಸ್ ರೆಡ್ಡಿ ಕಾರ್ಯಕ್ರಮ ಸಂಯೋಜಕರಾಗಿದ್ದರು.

ಆಡಳಿತಾಧಿಕಾರಿ ರಂಗಸ್ವಾಮಿ ಜಿ.ಆರ್., ಮಂಜುನಾಥ್ ಕುಮಾರ್ ಬಿ.ಎಚ್., ಜಿ.ನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-16-279486579

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.