ಚಿಕ್ಕಬಳ್ಳಾಪುರ: ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಂಡು ಮುನ್ನಡೆದಾಗ ಜೀವನದಲ್ಲಿ ಯಶಸ್ಸು ಸಾಧ್ಯ. ಮಹಿಳಾ ಹಕ್ಕುಗಳಿಗೆ ಒಕ್ಕೊರಲಿಂದ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಅಕ್ಕೈ ಪದ್ಮಶಾಲಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಚಕೋರ’ ಸಾಹಿತ್ಯ ವಿಚಾರ ವೇದಿಕೆಯು ‘ಕಾಯಕ ಯೋಗಿ ಬಸವಣ್ಣ ಅವರ ಚಿಂತನೆಗಳು ಮತ್ತು ಮಹಿಳೆ ಹಾಗೂ ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳ ಹೋರಾಟ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಗೌರವಿಸುವ ಜೊತೆಗೆ ಸೂಕ್ತ ಸ್ಥಾನಮಾನಗಳನ್ನು ನೀಡುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಮಹಿಳೆಯರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಬಲೀಕರಣವಾಗಿ ಲಿಂಗ ತಾರತಮ್ಯಗಳಿಂದ ಹೊರ ಬರಬೇಕು ಎಂದರು.

12ನೇ ಶತಮಾನದಲ್ಲಿ ಬಸವಣ್ಣ ತಮ್ಮ ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದರು. ಆದರೆ 21ನೇ ಶತಮಾನದಲ್ಲೂ ಸಹ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣದೆ ಶೋಷಿಸಿ ತಾರತಮ್ಯ ಮಾಡುತ್ತಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.

ನಾವೆಲ್ಲರು ಮತ್ತೆ ಬಸವಣ್ಣನವರ ತತ್ವ ಸಿದ್ದಾಂತ, ಅನುಭವ ಮಂಟಪದ ಬಗ್ಗೆ ಸಮಾಜಕ್ಕೆ ತಿಳಿಸಬೇಕು. ಸಮ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಹೇಳಿದರು.

ಅಧ್ಯಾಪಕ ಲೋಕೇಶಪ್ಪ ಮಾತನಾಡಿ, ಸಾಮಾಜಿಕ ಕಟ್ಟುಪಾಡುಗಳಿಂದ ಮಹಿಳೆಯರನ್ನು ಮುಖ್ಯ ವಾಹಿನಿಗೆ ಬಿಡುತ್ತಿಲ್ಲ. ಮೂಲೆ ಗುಂಪು ಮಾಡಲಾಗುತ್ತಿದೆ. ಆದರೆ ವಚನಕಾರ್ತಿ ಅಕ್ಕಮಹಾದೇವಿ ಕನ್ನಡದ ಮತ್ತು ಪ್ರಪಂಚದ ಮೊದಲ ಕವಯತ್ರಿ ಎಂದರು.

ಮಹಿಳೆಗೆ ಎಷ್ಟು ಸ್ಥಾನಮಾನ ನೀಡಲಾಗಿತ್ತು ಎಂಬುದಕ್ಕೆ ಅನುಭವ ಮಂಟಪವೇ ಸಾಕ್ಷಿ. ಹೀಗಿರುವಾಗ ಬಸವಣ್ಣನವರ ಜ್ಞಾನವನ್ನು ಜಾತಿ ಧರ್ಮಗಳ ಸಂಕೋಲೆಗಳಿಗೆ ನೇತು ಹಾಕದೆ ಮಾನವೀಯತೆಗೆ ಗೌರವ ಕೊಡುವಂಥಹ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಚಂದ್ರಯ್ಯ ಜಿ.ಡಿ ಅಧ್ಯಕ್ಷತೆವಹಿಸಿದ್ದರು. ‘ಚಕೋರ’ ಜಿಲ್ಲಾ ಸಂಚಾಲಕರಾದ ಪಾತಮುತ್ತಕಹಳ್ಳಿ ಮು.ಚಲಪತಿಗೌಡ, ಈ ಧರೆ ಪ್ರಕಾಶ್, ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಉಪನ್ಯಾಸಕ ಹಾಲಪ್ಪ, ವೆಂಕಟೇಶ್, ನರಸಿಂಹಮೂರ್ತಿ, ಹರೀಶ್, ಒಂದಡೆ ಸಂಸ್ಥೆ ಕಾರ್ಯದರ್ಶಿ ಮೋಹನ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-16-1392742918

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.