ಚಿಕ್ಕಮಗಳೂರು: ನಗರದ ಆದಿ ಚುಂಚನಗಿರಿ ಮಹಾವಿದ್ಯಾಲಯದಲ್ಲಿ ಏ.9,10ರಂದು ‘ಇಂಟರ್ನ್ಯಾಷನಲ್ ಕಾನ್ಪರೆನ್ಸ್ ಆನ್ ಎಮರ್ಜಿಂಗ್ ರಿಸರ್ಚ್ ಇನ್ ಸ್ಮಾರ್ಟ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮಷಿನ್ ಇನ್ಪರ್ಮ್ಯಾಟಿಕ್ಸ್ ಇಸಿಎಂಐ-2026’ (ಐಇಇಇ) ಅಂತರರಾಷ್ಟ್ರೀಯ ಸಮ್ಮೇ ಳನ ಆಯೋಜಿಸಲಾಗಿದೆ ಎಂದು ಪ್ರಾಂಶು ಪಾಲ ಎಂ.ಎ. ಗೌತಮ್ ತಿಳಿಸಿದರು.

‘ಇಸಿಎಂಐ–2026 ಸಮ್ಮೇಳನವು ಸಂಶೋಧಕರು, ಶಿಕ್ಷಕರು, ಉದ್ಯಮಿಗಳು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಲಿದೆ. ಸ್ಮಾರ್ಟ್ ಎಲೆಕ್ಟ್ರಾನಿಕ್ಸ್, ಇನ್ಪರ್ಮ್ಯಾಟಿಕ್ ಹಾಗೂ ಮಷಿನ್ ಇಂಟೆಲಿಜೆನ್ಸಿ ಕ್ಷೇತ್ರಗಳಲ್ಲಿ ಹೊಸ ವಿಚಾರಗಳು ಮತ್ತು ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳಲು ಅವಕಾಶ ಒದಗಿಸುತ್ತದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮ್ಮೇಳನಕ್ಕೆ ದೇಶ, ವಿದೇಶಗಳಿಂದ 544ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಬಂದಿವೆ. ಪ್ರಬಂಧಗಳ ಆಯ್ಕೆ ಪ್ರಕ್ರಿಯೆಯನ್ನು ಮೈಕ್ರೊಸಾಫ್ಟ್ ಸಿಎಂಆರ್ ಮೂಲಕ ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸಲಾಗಿದೆ. ಅಂತಿಮವಾಗಿ ಸುಮಾರು 141 ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಎರಡು ದಿನಗಳ ಪೇಪರ್ ಪ್ರೆಸೆಂಟೇಶನ್ ಅಧಿ ವೇಶನ ಆಯೋಜಿಸಲಾಗಿದೆ. ಒಟ್ಟು 5 ಸಮಾನಾಂತರ ಅಧಿವೇಶನಗಳು ಇರಲಿವೆ ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಭಾಗವಹಿಸಲಿದ್ದಾರೆ. ಸಮ್ಮೇಳನವು ಉನ್ನತ ಮಟ್ಟದ ಸಂಶೋಧನೆ, ನವೀನತೆಗೆ ಉತ್ತೇಜನ ನೀಡಲಿದೆ. ಜಾಗತಿಕ ತಾಂತ್ರಿಕ ಸಂಶೋಧನೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾ ಅಧ್ಯಕ್ಷೆ ಎಂ. ಸುಮಾ, ಪ್ರಕಾಶನ ವಿಭಾಗದ ಅಧ್ಯಕ್ಷ ಅನಿಲ್ ಕುಮಾರ್, ಪ್ರಾಧ್ಯಾಪಕ ಸಂಗಾರೆಡ್ಡಿ, ಮಧುಕುಮಾರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-126-670527577

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.