ಆಲ್ದೂರು: ಇಲ್ಲಿನ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬೇಸಿಗೆ ಬೆಸುಗೆ ಶಿಬಿರದಲ್ಲಿ ಫೋಟೋಗ್ರಫಿ ಕುರಿತ ಕಾರ್ಯಾಗಾರ ನಡೆಯಿತು

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಶೂನ್ ನಹರ್ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಬೆಂಗಳೂರಿನ ವನ್ಯಜೀವಿ ಛಾಯಾಗ್ರಾಹಕ ಮ್ಯಾಥ್ಯೂ ಅವರು, ಫೋಟೊಗಳನ್ನು ತೆಗೆಯುವಾಗ ಬಳಸಬೇಕಾದ ಎಚ್ಚರಿಕೆ, ಫೋನ್ಗಳಲ್ಲಿ ಫೋಟೊ ತೆಗೆಯುವ ವಿಧಾನ ಮತ್ತು ಹೆಚ್ಚಿನ ತಾಂತ್ರಿಕತೆ ಹೊಂದಿರುವ ಕ್ಯಾಮೆರಾಗಳ ಮಾಹಿತಿ, ಕ್ಯಾಮೆರಾಗಳಲ್ಲಿ ಇರುವಂತಹ ಸೆಟ್ಟಿಂಗ್ಸ್ಗಳನ್ನು ಬಳಸಿ ಗುಣಮಟ್ಟದ ಛಾಯಾಚಿತ್ರ ತೆಗೆಯುವ ರೀತಿಯನ್ನು ತಿಳಿಸಿದರು.

ಬಸರವಳ್ಳಿ, ಆಲ್ದೂರು, ಸತ್ತಿಹಳ್ಳಿ, ದೊಡ್ಡ ಮಾಗರವಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಛಾಯಾಗ್ರಾಹಕ ಮ್ಯಾಥ್ಯೂ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಗ್ರಂಥಪಾಲಕರಾದ ಕೆಂಚಯ್ಯ ಆಲ್ದೂರು, ಪೂರ್ಣೇಶ್ ಬೈಗೂರು, ರಾಗಿಣಿ ಡಿ.ಪಿ., ಶಬನಂ ಸತ್ತಿಹಳ್ಳಿ, ಗೀತಾ ಬಸರವಳ್ಳಿ, ಪಂಚಾಯಿತಿ ಮಾಜಿ ಸದಸ್ಯರಾದ ಪ್ರತಿಭಾ ನವೀನ್, ಬಿಲ್ ಕಲೆಕ್ಟರ್ ಮಂಜುನಾಥ್, ಡಿಇಒ ವಾಣಿ, ಸಿಬ್ಬಂದಿ ಪೂರ್ಣೇಶ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-126-423343281

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.