ಚಿಕ್ಕಮಗಳೂರು: ಐಡಿಎಸ್ಜಿ ಸರ್ಕಾರಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿ ಅಭಿಲಾಷ್ ಎಲ್.ಗೌಡ ಅವರು ಮೊದಲನೇ ರ್ಯಾಂಕ್ ಪಡೆಯುವ ಜತೆಗೆ 4 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅವರು ಜಯನಗರದ ನಿವಾಸಿ ಲೋಕೇಶ್ ಹಾಗೂ ರಾಧಾ ದಂಪತಿಯ ಪುತ್ರ. ತಾಯಿ ರಾಧಾ ಅವರು ನಗರದ ಸೇಂಟ್ ಮೇರಿಸ್ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿದ್ದಾರೆ.

‘ಈ ಪ್ರಶಸ್ತಿ ತಾಯಿ ಹಾಗೂ ಅಣ್ಣನಿಗೆ ಸಲ್ಲಬೇಕು. ನನ್ನ ಕಲಿಕೆಗೆ ಪೋಷಕರು, ಶಿಕ್ಷಕರು, ಸ್ನೇಹಿತರ ಸಹಕಾರ ಕಾರಣ. ಬೇರೆ ಬೇರೆ ವಿಶ್ವ ವಿದ್ಯಾಲಯಗಳಿಂದ ಪುಸ್ತಕ ಹಾಗೂ ಮಾಹಿತಿ ಸಂಗ್ರಹಿಸುತ್ತಿದ್ದೆ. ಜೊತೆಗೆ ಪರಿಶ್ರಮವೂ ಇತ್ತು’ ಎಂದು ಅಭಿಲಾಷ್ ಎಲ್.ಗೌಡ ಹೇಳಿದರು.

ಮುಂದೆ ಪಿಎಚ್ಡಿ ಮಾಡಲು ನಿರ್ಧಾರ ಮಾಡಿದ್ದೇನೆ. ಉನ್ನತ ಶಿಕ್ಷಣದಿಂದ ಒಳ್ಳೆಯ ಅವಕಾಶಗಳು ಸಿಗುತ್ತವೆ. ಪ್ರತಿಯೊಬ್ಬರೂ ಗುರಿಗಳನ್ನು ಸಾಧಿಸಬೇಕು, ಈ ಫಲಿತಾಂಶ ಹಾಗೂ ಪ್ರಶಸ್ತಿ ನನಗೆ ತೃಪ್ತಿ ತಂದಿದೆ ಎಂದು ಅಭಿಪ್ರಾಯ ಹಂಚಿಕೊಂಡರು.

ರಾಧಾ ಮಾತನಾಡಿ, ‘ಮಗ ಬದುಕಿನಲ್ಲಿ ಕಷ್ಟಪಟ್ಟು ಮುಂದೆ ಬಂದಿದ್ದಾನೆ. ನಿರಂತರ ಪ್ರಯತ್ನದಿಂದ ಉತ್ತಮ ಫಲಿತಾಂಶ ಬಂದಿದೆ. ನಾನು ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡಿ ಮಗನ ವಿದ್ಯಾಭ್ಯಾಸ ಮಾಡಿಸಿದ್ದೇನೆ. ಮಗನ ಸಾಧನೆ ಸಂತಸ ತಂದಿದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-126-142961719

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.