ಕಣಿವೆ (ನರಸಿಂಹರಾಜಪುರ): ವಿಶ್ವದ 210 ದೇಶಗಳಲ್ಲಿ 30 ಲಕ್ಷ ರೋಟರಿ ಸದಸ್ಯರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೋಟರಿ 3180ರ ಜಿಲ್ಲಾ ಗವರ್ನರ್ ಕೆ.ಫಾಲಾಕ್ಷ ಹೇಳಿದರು.

ತಾಲ್ಲೂಕಿನ ಕಣಿವೆಯಲ್ಲಿ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ಜಿಲ್ಲೆಯಲ್ಲಿ 87 ಕ್ಲಬ್ಗಳಿವೆ. ಭಾರತ ದೇಶದಲ್ಲಿ ರೋಟರಿ ಸಂಸ್ಥೆ ಎರಡು ಸಾವಿರ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾಗಿದೆ. ನರಸಿಂಹರಾಜಪುರ ರೋಟರಿ ಕ್ಲಬ್ ಅತಿ ಹೆಚ್ಚು ಸಮಾಜಮುಖಿ ಕಾರ್ಯಕ್ರಮ ಮಾಡಿದ್ದು, ದಾಖಲೆ ನಿರ್ಮಿಸಿದೆ. ಇದರಿಂದ ರೋಟರಿ ಘನತೆ ಹೆಚ್ಚಾಗಿದೆ ಎಂದರು.

ರೋಟರಿ ಜಿಲ್ಲೆ ಪೂರ್ವ ಗವರ್ನರ್ ಬಿ.ಸಿ. ಗೀತಾ ಮಾತನಾಡಿ, ನರಸಿಂಹರಾಜಪುರ ರೋಟರಿ ಕ್ಲಬ್ ಕಳೆದ 10 ತಿಂಗಳಲ್ಲಿ 95 ಸಮಾಜಮುಖಿ ಕಾರ್ಯ ಕ್ರಮ ಮಾಡಿದೆ ಎಂದು ಶ್ಲಾಘಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲೆ 3182ರ ಉಪ ರಾಜ್ಯಪಾಲ ರಾಜಗೋಪಾಲ್ ಜೋಷಿ, ರೇಖಾ ಫಾಲಾಕ್ಷ, ರೋಟರಿ ಕ್ಲಬ್ ಕಾರ್ಯದರ್ಶಿ ಕಟಗಳಲೆ ಲೋಕೇಶ್, ವಲಯ ಲೆಫ್ಟಿನೆಂಟ್ ನಟರಾಜ ಗೋಗಟೆ, ವಾಗ್ಮಿ ದಾಮೋದರ ಶರ್ಮಾ, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಆರ್.ಡಿ. ರವೀಂದ್ರ, ನಿಲುಗಳಿ ಪದ್ಮನಾಭ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-126-1166901576

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.