ಚಿಕ್ಕಮಗಳೂರು: ಪದವಿ ಗಳಿಸಿದ ವಿದ್ಯಾರ್ಥಿಗಳು ವಿಭಿನ್ನ ರೀತಿಯ ಆಲೋಚನೆಗಳ ಮೂಲಕ ಕೆಲಸ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಎಐಟಿ ಕಾಲೇಜಿನ ಎಸ್.ಟಿ.ಎನ್. ರಂಗಮಂದಿರ ದಲ್ಲಿ ಸೋಮವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭ ಹಾಗೂ ರ್ಯಾಂಕ್ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲಿಕೆಯ ನಂತರ ವಿದ್ಯಾರ್ಥಿ ಜೀವನ ಸಮಾಜದಲ್ಲಿ ಇನ್ನೊಂದು ರೀತಿ ಬದಲಾವಣೆ ಆಗಲಿದೆ. ನಾಯಕತ್ವ, ಶಿಸ್ತು ಮತ್ತು ಸಮಾಜದೊಂದಿಗೆ ಆವಿನಾಭಾವ ಸಂಬಂಧ ಬೆಳಸಿಕೊಳ್ಳಬೇಕು. ಭವಿಷ್ಯದಲ್ಲಿ ಉದ್ದಿಮೆದಾರರಾಗಿ ಬೆಳವಣಿಗೆ ಹೊಂದಬೇಕು ಎಂದು ಸಲಹೆ ನೀಡಿದರು.

ವೃತ್ತಿ ಆರಂಭದಲ್ಲಿಯೇ ಇಂದಿನ ಯುವಜನ ಅನೇಕ ಒತ್ತಡ ಎದುರಿಸುತ್ತಿದ್ದಾರೆ. ಇದನ್ನು ಸಮರ್ಥವಾಗಿ ಎದುರಿಸುವ ಚಾಕಕ್ಯತೆ ಅವಶ್ಯಕ. ಕಷ್ಟ-ಸುಖ, ಲಾಭ-ನಷ್ಟಗಳು ಬದುಕಿನಲ್ಲಿ ಎದುರಾಗುವುದು ಸಹಜ. ಉದ್ವೇಗಕ್ಕೆ ಒಳಗಾಗದೆ ಸದಾ ಸಮಾಧಾನದಿಂದ ನಿರ್ವಹಿಸಬೇಕು ಎಂದು ತಿಳಿಸಿದರು.

ಸಮಾಜದ ಎದುರು ವಿದ್ಯಾರ್ಥಿಗಳು ಮೊದಲು ವಿನಯಶೀಲರಾಗಬೇಕು. ಜ್ಞಾನಕ್ಕೆ ಸಂಬಂಧಿಸಿದ ಕೌಶಲಗಳ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿ ಜೀವನದ ನಂತರ ಸಮಾಜವೇ ಬದುಕಿನ ಪಾಠ ಕಲಿಸಲಿದೆ. ಸ್ವಯಂ ಪ್ರೇರಣೆಯಿಂದ ಒಳ್ಳೆತನವನ್ನು ಬೆಳೆಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ತೇಗಳುವಿಕೆ ಹೆಚ್ಚಾಗಲಿದೆ ಎಂದರು.

ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್(ಎಐಸಿಟಿಇ) ಮಾಜಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಮಾತನಾಡಿ, ‘ವಿದ್ಯಾರ್ಥಿಗಳು ಸಮಾಜಕ್ಕಾಗಿ ಮೌಲ್ಯ ಸೃಷ್ಟಿಸಿದಾಗ ಅಲ್ಲಿ ಯಶಸ್ಸು ಸಾಧ್ಯ. ವಾಸ್ತವಾಗಿ ಸುವರ್ಣ ಕಾಲದಲ್ಲಿ ನೀವು ಜೀವಿಸುತ್ತಿದ್ದೀರಿ. ಕೇಂದ್ರ ಸರ್ಕಾರವು ಅಮೃತ ಕಾಲವೆಂದೇ ಹೇಳುತ್ತದೆ. ಈ ಸಮಯದಲ್ಲಿ ಏನೇ ಮಾಡಿದರೂ ಬಹಳ ಯಶಸ್ವಿಯಾಗುತ್ತದೆ’ ಎಂದು ಹೇಳಿದರು.

ಭಾರತ ಉದ್ಯಮಶೀಲ ರಾಷ್ಟ್ರವಾಗಿ ಸಾಗುತ್ತಿದೆ. ಎ.ಐ ತಂತ್ರಜ್ಞಾನ ಯುವ ಜನತೆಗೆ ಉದ್ಯಮಿಯಾಗಲು ಸಹಾಯ ಮಾಡುತ್ತಿದೆ. ವಿದ್ಯಾರ್ಥಿ ದಿಸೆಯಿಂದಲೇ ಕೌಶಲ ಹೆಚ್ಚಿಸಿಕೊಳ್ಲಬೇಕು ಎಂದರು.

ಎಐಟಿ ಪ್ರಾಂಶುಪಾಲ ಎಂ.ಎ.ಗೌತಮ್ ಮಾತನಾಡಿ, ‘ವಿದ್ಯಾರ್ಥಿಗಳು ಪದವಿ ಪಡೆದು ನಿರ್ಗಮಿಸಿದರೂ, ಸಂಸ್ಥೆಯೊಂದಿಗಿನ ಸಂಬಂಧ ಕೊನೆಗೊಳ್ಳುವುದಿಲ್ಲ. ಹಳೆಯ ವಿದ್ಯಾರ್ಥಿಗಳಾಗಿ ಜೀವಮಾನದ ಬಂಧವಾಗಿ ರೂಪಾಂತರಗೊಳ್ಳಬೇಕು’ ಎಂದು ಹೇಳಿದರು.

ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಆದಿಚುಂಚನಗಿರಿ ವಿವಿ ರಿಜಿಸ್ಟ್ರರ್ ಸಿ.ಕೆ.ಸುಬ್ಬರಾಯ, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಸಂಗಾರೆಡ್ಡಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-126-914172671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.