ತರೀಕೆರೆ: ರಾಜ್ಯದಲ್ಲಿ ಉಪ್ಪಾರ ಸಮುದಾಯದ ಜನಸಂಖ್ಯೆ 35 ಲಕ್ಷಕ್ಕೂ ಹೆಚ್ಚಿದೆ. ಸಮಾಜದಲ್ಲಿ ಸಂಘಟನೆಯ ಕೊರತೆ ಇದ್ದು, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಸಮುದಾಯವನ್ನು ಮುಂಚೂಣಿಗೆ ತರಬೇಕಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಆರ್. ಅನಂತಪ್ಪ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ, ತಾಲ್ಲೂಕು ಭಗೀರಥ ಉಪ್ಪಾರ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೌರಾಣಿಕ ಹಿನ್ನೆಲೆಯ ಭಗೀರಥರು ತಮ್ಮ ಹಿರಿಯರ ಮೇಲೆ ಇದ್ದ ಶಾಪ ವಿಮೋಚನೆಗಾಗಿ ಕಠಿಣ ಶ್ರಮವಹಿಸಿ ಗಂಗೆಯನ್ನು ಧರೆಗೆ ತಂದವರು ಎಂಬ ಪ್ರತೀತಿ ಇದೆ. ಇಂತಹವರ ವಂಶಸ್ಥರಾದ ನಾವು ಸ್ವಾಭಿಮಾನಿಗಳು, ಶ್ರಮಜೀವಿಗಳು ಮತ್ತು ನುಡಿದಂತೆ ನಡೆಯುವವರು. ಸಮಾಜದ ಅಭಿವೃದ್ಧಿಗಾಗಿ ನಾವೆಲ್ಲರೂ ಅವಿರತವಾಗಿ ಶ್ರಮಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭಾ ಮುಖ್ಯಾಧಿಕಾರಿ ಸಿ.ಎಸ್. ಮಂಜುನಾಥ್, ಕಠಿಣ ಶ್ರಮ, ಅಸಾಧ್ಯವಾದುದನ್ನು ಸಾಧಿಸುವುದು, ಸ್ವಾಭಿಮಾನ ಮತ್ತು ಭಕ್ತಿಯ ಸಂಕೇತವೇ ಭಗೀರಥರು. ದೇಶದ ಹಲವು ಭಾಗಗಳಲ್ಲಿ ಇವರ ಪ್ರತಿಮೆ ಇವೆ. ಇವರ ಆಧ್ಯಾತ್ಮ, ಆದರ್ಶ ಮತ್ತು ಚಿಂತನೆಗಳನ್ನು ಅಳವಡಿಕೊಳ್ಳಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಚೇತನ್ ಗೌಡ ಉಪನ್ಯಾಸ ನೀಡಿ, ಭಗೀರಥರು ಭಾರತದ ನೆಲೆಗಟ್ಟನ್ನು ಭದ್ರಗೊಳಿಸಿದವರು. ನಮ್ಮ ಸಾಧನೆಗೈದ ಪೂರ್ವಿಕರ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದರು.

ಸಾತಂತ್ರ್ಯ ಸಂಗ್ರಾಮದಲ್ಲಿ ಉಪ್ಪಾರ ಸಮಾಜದವರ ಪಾತ್ರ ಮಹತ್ವದ್ದಾಗಿದೆ. ತರೀಕೆರೆ ಆಳ್ವಿಕೆ ಮಾಡಿದ ಪಾಳೆಗಾರರಿಗೆ ನಿಷ್ಠಾವಂತರಾಗಿದ್ದವರು, ಶ್ರೀಮಂತ ವ್ಯಾಪಾರಸ್ಥರಾಗಿದ್ದವರು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡದೆ ಸಮಾಜ ಹಿಂದುಳಿದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಮಾಜದ ಬಲವರ್ಧನೆಗೆ ಶ್ರಮಿಸಬೇಕು ಎಂದರು.

ಸಮಾಜದ ಅಧ್ಯಕ್ಷ ಟಿ.ಎಸ್. ಬಸವರಾಜ್, ಪ್ರಧಾನ ಕಾರ್ಯದರ್ಶಿ ಟಿ. ಹನುಮಂತಪ್ಪ, ಯುವ ಘಟಕದ ಅಧ್ಯಕ್ಷ ಕೆ.ಎಂ. ಹರೀಶ್ ಮಾತನಾಡಿದರು. ಶಾಸಕ ಜಿ.ಎಚ್. ಶ್ರೀನಿವಾಸ ಅವರ ಸಂದೇಶವನ್ನು ಸಭೆಗೆ ತಿಳಿಸಲಾಯಿತು.

ಪಟ್ಟಣದ ಕನಮನಹಟ್ಟಿಯಲ್ಲಿರುವ ಸಾಲುಮರದಮ್ಮ ದೇವಸ್ಥಾನದಿಂದ ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾತಂಡಗಳೊಂದಿಗೆ ಭಗೀರಥರ ಚಿತ್ರದ ಮೆರವಣಿಗೆ ನಡೆಯಿತು.

ಶಿಕ್ಷಕ ಎಲ್. ಹರೀಶ್ ಸ್ವಾಗತಿಸಿದರು. ಶಿಕ್ಷಕ ಆರ್. ವಿರೂಪಾಕ್ಷ ನಿರೂಪಿಸಿದರು. ಶಿಕ್ಷಕ ಕರಿಯಪ್ಪ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-126-718213719

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.