ಚಿಕ್ಕಮಗಳೂರು: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಅಗತ್ಯ ಎಂದು ಮೂಡಿಗೆರೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸವಿತಾರಮೇಶ್ ಅಭಿಪ್ರಾಯಪಟ್ಟರು.

ಲೇಡೀಸ್ ಕ್ಲಬ್ ವತಿಯಿಂದ ನಗರದ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ಮೂರನೇ ವಾಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸುಶಿಕ್ಷಿತರಾಗಿ ಆರ್ಥಿಕ ಸ್ವಾವಲಂಬನೆಯತ್ತ ಗಮನಹರಿಸಬೇಕು ಎಂದರು.

ವೇದಕಾಲದಲ್ಲಿ ಸ್ತ್ರೀಯನ್ನು ಪೂಜ್ಯಭಾವನೆಯಿಂದ ಕಾಣಲಾಗುತ್ತಿತ್ತು. ಮಧ್ಯಯುಗದಲ್ಲಿ ಮನುಸ್ಮೃತಿಯಿಂದ ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಬಿಂಬಿಸಲಾಯಿತು. ಆಧುನಿಕತೆಯ ಬದಲಾವಣೆಯ ಗಾಳಿ ಬೀಸಿ ಮತ್ತೆ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ ಎಂದರು.

ಗಂಡು-ಹೆಣ್ಣು ಎಂಬ ತಾರತಮ್ಯ ಮಾಡದೆ ಮಕ್ಕಳನ್ನು ಬೆಳೆಸಿದರೆ ಅವರ ಭವಿಷ್ಯ ಉತ್ತಮವಾಗಿರುತ್ತದೆ. ಮಹಿಳೆಯರಿಗೆ ಸ್ವಾತಂತ್ರ ಮತ್ತು ಸಮಾನತೆ ಸಿಗುತ್ತಿಲ್ಲ. ಶೇ 33 ಮೀಸಲಾತಿ ದೊರೆತರೂ ಸರಿಯಾದ ತರಬೇತಿ ಇಲ್ಲ. ವಿದ್ಯೆಗೆ ಪ್ರಾಧಾನ್ಯ ಸಿಗಬೇಕಾಗಿದೆ ಎಂದು ಹೇಳಿದರು.

ಹೆಣ್ಣು ಎಷ್ಟೇ ಕಲಿತರೂ ಸಮಾಜದಲ್ಲಿ ಒಂದಿಲ್ಲೊಂದು ದೌರ್ಜನ್ಯಕ್ಕ ಒಳಗಾಗುತ್ತಿದ್ದಾಳೆ. ಮಹಳೆಯರು ತಮ್ಮ ಸಮಸ್ಯೆಗಳಿಗೆ ತಾವೇ ಪರಿಹಾರ ಕಂಡುಕೊಳ್ಳುವ ಬುದ್ಧಿಶಕ್ತಿ ಬೆಳೆಸಿಕೊಳ್ಳಬೇಕು. ಆರ್ಥಿಕಸ್ವಾವಲಂಬನೆ ಪಡೆಯಬೇಕು. ಮಹಿಳೆ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲಳು. ಸ್ತ್ರಿ ಸಹನಾಶೀಲಳು ಮತ್ತು ಕ್ಷಮಯಾಧರಿತ್ರಿಯೂ ಹೌದು. ದೇವರು ಹೆಣ್ಣಿಗೆ ಹೆಚ್ಚಿನ ಬುದ್ಧಿಶಕ್ತಿ ಕೊಟ್ಟಿರುತ್ತಾನೆಂದು ಸವಿತಾ ನುಡಿದರು.

ಲೇಡಿಸ್ಕ್ಲಬ್ ಅಧ್ಯಕ್ಷೆ ಯಶೋದಾ ಶಿವಪ್ಪ ಮಾತನಾಡಿ, ಸಂಘ,ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶ ಯಾವುದೇ ಒಳ್ಳೆಯ ಕೆಲಸ ಮಾಡುವ ಮೊದಲು ಸಂಕಲ್ಪ ದೃಢವಾಗಿರಬೇಕು. ಅದು ಪಾರದರ್ಶಕವಾಗಿರಬೇಕು. ನಾವು ಮಾಡುವ ಅಳಿಲು ಸೇವೆ ಇನ್ನೊಬ್ಬರ ಮನಸ್ಸು ತಟ್ಟುವಂತಿರಬೇಕು.ಅದು ಒಬ್ಬರಿಂದ ಅಸಾಧ್ಯ ಎಂದರು.

ನಾದಚೈತನ್ಯ ಸಾಂಸ್ಕೃತಿಕ ಯುವ ಕಲಾ ವೇದಿಕೆಯ ಕಾರ್ಯದರ್ಶಿ ರೇಖಾಪ್ರೇಮ್ಕುಮಾರ್ ಮಾತನಾಡಿ ‘ನಾರಿತ್ವದಿಂದ ನಾರಾಯಣತ್ವದೆಡೆಗೆ’ ಸಾಗುವುದಲ್ಲಿ ಸಾರ್ಥಕತೆ ಇದೆ. ಕುಟುಂಬ ನಿರ್ವಹಣೆ ಅಷ್ಟೇ ಅಲ್ಲ ಸಮಾಜ ನಿರ್ಮಾಣದಲ್ಲೂ ಸ್ತ್ರೀ ಪಾತ್ರ ದೊಡ್ಡದಿದೆ. ಮಹಿಳಾ ದಿನಾಚರಣೆಯನ್ನು ಪುರುಷರೂ ಆಚರಿಸಿ ಗೌರವಿಸಿದಾಗ ಅರ್ಥಪೂರ್ಣ ಎಂದರು.

ಯಲಗುಡಿಗೆ ಶಿಕ್ಷಕಿ ಗೀತಾರಾಜವತ್, ದಾನಿಗಳಾದ ಸುಲೋಚನಮ್ಮ ಶ್ರೀನಿವಾಸ್ ಮತ್ತು ಸುಜಾತಗುರುಮೂರ್ತಿ, ಗಾಯಕಿ ರೇಖಾ, ಪಿಎನ್ಬಿ ಉಪಸಂಪಾದಕಿ ಸುಮಿತ್ರಾಶಾಸ್ತ್ರಿ ಅವರನ್ನು ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರ್, ಟ್ರಸ್ಟಿ ಸುರೇಶ್, ಪ್ರಾಂತೀಯಅಧ್ಯಕ್ಷ ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-126-2059189713

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.