ಚಿಕ್ಕೋಡಿ: ‘ಡಿಡಿಪಿಐ ಕಚೇರಿಯತ್ತ ಸುಳಿಯದ ಸಾಕಷ್ಟು ಶಿಕ್ಷಕರಿದ್ದಾರೆ. ಅಂತವರನ್ನು ಶಿಕ್ಷಕರ ಸಂಘಟನೆ ಸನ್ಮಾನಿಸಿ ಗೌರವಿಸಬೇಕು. ಈ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಕೆಲಸವಾಗಬೇಕು’ ಎಂದು ಚಿಕ್ಕೋಡಿ ಡಿಡಿಪಿಐ ಆರ್.ಎಸ್. ಸೀತಾರಾಮು ಹೇಳಿದರು.

ಪಟ್ಟಣದ ಇಂದಿರಾನಗರ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಹಾಗೂ ತಾಲ್ಲೂಕು ಸಂಘಟನೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.‘ಶಿಕ್ಷಕರ ಒಗ್ಗಟ್ಟು ಸಂಘಟನೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ಮಾದರಿಯಾಗಿದೆ. ಅಧಿಕಾರ ಇದ್ದಾಗ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕಿರುವುದು ಅವಶ್ಯಕವಾಗಿದೆ’ ಎಂದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ. ಹಿರೇಮಠ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ, ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಸಂಘಟನೆ ಪ್ರಯತ್ನಿಸಬೇಕು. ಶಿಕ್ಷಕರ ಸಂಘಟನೆ ಬಹಳಷ್ಟು ಗಟ್ಟಿ ಸಂಘಟನೆಯಾಗಿದೆ’ ಎಂದು ಹೇಳಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಾಗೂ ವಿವಿಧ ತಾಲ್ಲೂಕು ಸಂಘಟನೆಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಚಿಕ್ಕೋಡಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಿದ್ರಾಮ ಲೋಕನ್ನವರ, ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಎನ್.ಜಿ. ಪಾಟೀಲ, ಜಿ.ಆರ್. ಸನದಿ, ಚಂದ್ರಶೇಖರ ಪೂಜಾರಿ, ತಾಲ್ಲೂಕು ಸಂಘಟನೆಯ ಅಧ್ಯಕ್ಷ ಪ್ರಭಾಕರ ಮಜಲಟ್ಟಿ, ವೈ.ಎಸ್. ಬುಡ್ಡಗೋಳ, ವಿ.ಎಂ. ನಾಯಕ, ಮಾಲತೇಶ ಸಣ್ಣಕ್ಕಿ, ಆರ್.ಕೆ. ಕಾಂಬಳೆ, ಸುನೀತಾ ಎಸ್, ಎನ್.ಎಸ್. ಕಾಂಬಳೆ, ಎ.ಎಂ. ನದಾಫ್, ಎಸ್.ಎ. ಖಡ್ಡ, ಮಹಾವೀರ ಕಾಂಬಳೆ, ರಾಜು ಮಾನೆ, ಶೈಲಶ್ರೀ ಜೋಶಿ, ವಿಶ್ವನಾಥ ಧುಮಾಳ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-678245389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.