ಚಿಂಚೋಳಿ: ಬಂಜಾರಾ ಸಮು ದಾಯದಲ್ಲಿ ವರದಕ್ಷಿಣೆ ಪಿಡುಗು ನಿರ್ಮೂಲನೆ ಮಾಡಲು ಸಂಕಲ್ಪ ತೊಟ್ಟಿರುವ ಸಮಾಜ ಬಾಂಧವರು ತಾಲ್ಲೂಕಿನ ಪಾಲ್ತ್ಯಾ ತಾಂಡಾದ ರಾಮರಾವ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಭೆ ನಡೆಸಿ ಪಿಡುಗಿನ ವಿರುದ್ಧ ಮಹಾ ಅಭಿಯಾನ ನಡೆಸಲು ಮುಂದಾಗಿದ್ದಾರೆ.

ವರದಕ್ಷಿಣ ಪಿಡುಗಿನಿಂದಾಗುತ್ತಿರುವ ಪರಿಣಾಮಗಳು ಹಾಗೂ ಅಮಾನವೀಯ ಪದ್ಧತಿ ಕೈಬಿಡುವುದು ಸೇರಿದಂತೆ ಹೆಣ್ಣು ಹೆತ್ತವರ ಸ್ವಾಭಿಮಾನದ ಬದುಕಿಗಾಗಿ ಸಂಕಲ್ಪ ಮಾಡಿ ಸಲಗರ ಬಸಂತಪುರದ ಆದಿ ಲಕ್ಷ್ಮೀ ಶಕ್ತಿಪೀಠದ ರಾಜು ಮಹಾರಾಜರ ಸಾನ್ನಿಧ್ಯದಲ್ಲಿ ಬುಧವಾರ ಸಭೆ ನಡೆಯಿತು.

ತಾರಾಸಿಂಗ ದಳಪತಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ನಾರಾಯಣ ರಾಠೋಡ, ಸೂರು ನಾಯಕ, ಗುರುನಾಥ ರಾಠೋಡ, ರಾಮಶೆಟ್ಟಿ, ದಶರಥ ನಾಯಕ, ಪ್ರಭು ನಾಯಕ, ಬಲಭೀಮ ನಾಯಕ, ರಾಮಶೆಟ್ಟಿ ರಾಠೋಡ, ಅಣದು ಚವ್ಹಾಣ, ತಾರಾಸಿಂಗ ನಾಯಕ, ರಾಜು ರಾಠೋಡ, ಶಾಮರಾವ ರಾಠೋಡ, ಜಗನ್ನಾಥ ಜಾಧವ, ರಾಜಕುಮಾರ ಸಜ್ಜನಕೊಳ್ಳ, ಪ್ರೇಮಸಿಂಗ, ಕಿಶೋರ ರಾಠೋಡ ಮೊದಲಾದವರು ಪಾಲ್ಗೊಂಡು ಸಲಹೆ–ಸೂಚನೆ ನೀಡಿದರು.

ಇದೊಂದು ಒಳ್ಳೆಯ ಬೆಳವಣಿಗೆಯಾಗಿದ್ದು, ಸಮಾಜದಲ್ಲಿ ಬೇರೂರಿದ್ದ ಅನಿಷ್ಠ ಪದ್ಧತಿ ಹೊಡೆದೋಡಿಸಲು ಎಲ್ಲರೂ ಕೈಜೋಡಿಸಲು ನಿರ್ಧರಿಸಿದ್ದು, ಅಂತಿಮವಾಗಿ ಚರ್ಚಿಸಲು ಮೇ 17ರಂದು ಬೆಳಿಗ್ಗೆ 11 ಗಂಟೆಗೆ ಮಹಾ ಪಂಚಾಯತ್ (ಬೃಹತ್ ಸಭೆ)ನಡೆಸಲು ತೀರ್ಮಾನಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-31-900084146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.