ಚಿಂತಾಮಣಿ: ‘ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಭಾಷಾ ಸಾಹಿತ್ಯದ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿರುವ ಮಹಾನ್ ಸಂಸ್ಥೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡದ ವಿಭಾಗದ ಮುಖ್ಯಸ್ಥ ಎಸ್.ಅಶ್ವತ್ಥ್ ಅಭಿಪ್ರಾಯಪಟ್ಟರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ಕನ್ನಡ ಭಾಷೆಯ ಪ್ರಸಾರ ಹಾಗೂ ಅದರ ಸಾಂಸ್ಕೃತಿಕ ವೈಭವವನ್ನು ಜನಮಾನಸದಲ್ಲಿ ನೆಲೆಗೊಳಿಸುವ ಕಾರ್ಯವನ್ನು ಕಸಾಪ ಅನೇಕ ದಶಕ ಗಳಿಂದ ನಿರ್ವಹಿಸುತ್ತಿದೆ. ಅನೇಕ ಕವಿ, ಲೇಖಕರು, ಚಿಂತಕರು ಈ ಪರಿಷತ್ತಿನ ವೇದಿಕೆಯಿಂದಲೇ ಬೆಳಗಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮ ಮಂಗಳ ಮಾತನಾಡಿ, 112ನೇ ಕಸಾಪ ಸಂಸ್ಥಾಪನಾ ದಿನಾಚರಣೆ ಕೇವಲ ಒಂದು ಸಂಭ್ರಮದ ಕ್ಷಣವಲ್ಲ, ಜವಾಬ್ದಾರಿ ನೆನಪಿಸುವ ದಿನವೂ ಹೌದು. ಕನ್ನಡದ ಅಭಿವೃದ್ಧಿಗೆ ಏನು ಕೊಡುಗೆ ನೀಡಬಹುದು ಎಂಬುದನ್ನು ಯೋಚಿಸಬೇಕು ಎಂದರು.

ಮಸ್ತೇನಹಳ್ಳಿ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲೆ ಅರುಣ ಪಲ್ಲವಿ ಮಾತನಾಡಿ, ಸ್ಥಳದಲ್ಲಿ ಸ್ವರಚಿತ ಕವನ ಬರೆದು ವಾಚನ ಮಾಡಿದ ಕಾರ್ಯಕ್ರಮ ವಿಶೇಷವಾಗಿದ್ದು, ವಿದ್ಯಾರ್ಥಿಗ ಳಲ್ಲಿ ಭಾಷೆಯ ಬೆಳವಣಿಗೆಗೆ ಸಹಕಾರಿ ಎಂದರು.

ಸೌಂದರ್ಯ ಗ್ರಾಮೀಣ ಮತ್ತು ಪಟ್ಟಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಎಂ.ವಿಜಯ ಮಾತನಾಡಿ, ಜಾಗತೀಕರಣದ ಕಾಲದಲ್ಲಿ ಇಂಗ್ಲಿಷ್ ಮತ್ತು ಇತರ ಭಾಷೆಗಳ ಪ್ರಭಾವ ಹೆಚ್ಚಾಗುತ್ತಿದೆ. ಕನ್ನಡ ಭಾಷೆಯನ್ನು ಮರೆಯಬಾರದು. ಮನೆಯಲ್ಲಿ, ಶಾಲೆಯಲ್ಲಿ ಕನ್ನಡವನ್ನು ಬಳಸಬೇಕು ಎಂದರು.

ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿ ಕವನ ಬರೆದು ವಾಚಿಸುವುದು ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ಜಾನ್ಹವಿ ಯೋಗ ನೃತ್ಯ ನಡೆಸಿ ಕೊಟ್ಟರು. ನಾಗರಾಣಿ ಮತ್ತು ಲೀಲಾ ಲಕ್ಷ್ಮಿ ನಾರಾಯಣ್ ಕನ್ನಡ ಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ವಿ. ಶ್ರೀನಿವಾಸನ್, ಬೇಟರಾಯಪ್ಪ, ರಾಧಮಣಿ, ಕನ್ನಡ ಭಾಗೀರಥಿ, ಆರ್.ಮಂಜುನಾಥ್, ಆರ್.ನಾಗರಾಜು, ಕೆ.ಎಸ್ ನೂರುಲ್ಲಾ, ರಂಗನಾಥ ಎಸ್.ಎನ್, ಎಂ.ವೈ ನಂಜುಂಡಗೌಡ, ಟಿ.ಎಂ ಈಶ್ವರ್ ಸಿಂಗ್, ವೆಂಕಟೇಶ್ ಕೆ.ಎಂ, ಎಂ.ವಿ ರಮೇಶ್, ಬಿ.ವಿಶ್ವನಾಥ್, ಎನ್.ಹಾರಿಕ, ಗಿರೀಶ್, ನವೀನ್, ನಾರಾಯಣಸ್ವಾಮಿ ಮಂಜುಳಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-16-1580046159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.