ಕೆ.ಆರ್.ನಗರ: ‘ಪರಿಶಿಷ್ಟರನ್ನು ತುಳಿಯುವುದು ಸಂವಿಧಾನ ಜಾರಿಯಾದ ನಂತರ ಪ್ರಾರಂಭವಾಗಿದ್ದಲ್ಲ, ಅದು ಸಾವಿರಾರು ವರ್ಷಗಳ ಹಿಂದಿನಿಂದಲೂ ಬಂದಿದೆ’ ಎಂದು ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನ ಗುರುಪೀಠದ ಬಸವನಾಗಿ ದೇವ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಹತ್ತಿಗೋಡು ಸಣ್ಣಗೌರಮ್ಮ ಸಿದ್ದಪ್ಪ ಫಂಕ್ಷನ್ ಹಾಲ್ನಲ್ಲಿ ಬುದ್ಧ ಬಸವ ಅಂಬೇಡ್ಕರ್ ಸಮನ್ವಯ ಸಮಿತಿ ವತಿಯಿಂದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಬುಧವಾರ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

‘ಈವರೆಗೆ ಲಕ್ಷಾಂತರ ಪರಿಶಿಷ್ಟರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ, ಕೊಲೆಯಾಗಿದ್ದಾರೆ, ಅತ್ಯಾಚಾರ, ತುಳಿತಕ್ಕೆ ಒಳಗಾಗಿದ್ದಾರೆ. ಪರಿಶಿಷ್ಟರು ಇಲ್ಲಿನ ಮೂಲ ನಿವಾಸಿಗಳು, ಇಲ್ಲಿನ ಮೂಲ ನಿವಾಸಿಗಳ ಮೇಲೆ ಪರಿಶಿಷ್ಟರ ಮೇಲೆ ಎಲ್ಲಿಂದಲೋ ಬಂದವರಿಂದ ದೌರ್ಜನ್ಯ, ಅತ್ಯಾಚಾರ ನಡೆದರೆ ಸಹಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸೀರೆ, ಪಂಚೆ, ₹500, ₹1000ಗಳಿಗೆ ಮಾರಿಕೊಂಡಿದ್ದರಿಂದ ನಾವು ಈ ಸ್ಥಿತಿಗೆ ಬರಲು ಕಾರಣವಾಗಿದೆ. ನಮ್ಮ ದೇಶ, ರಾಜ್ಯ ಮತ್ತು ಕುಟುಂಬ ಕಳ್ಳರು, ಸುಳ್ಳರ ಕೈಯಲ್ಲಿ ಸಿಗದಂತೆ ಜಾಗೃತರಾಗಬೇಕಾಗಿದೆ’ ಎಂದರು.

ಉದ್ಯಮಿ ರವಿ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಬೇಕು, ಉನ್ನತ ಹುದ್ದೆ ಪಡೆಯುವವರೆಗೂ ಪ್ರಯತ್ನ ಮಾಡಬೇಕು. ಹುಲಿಯ ಹಾಲು ಕುಡಿಯುವುದು ಎಂದರೆ ಸಾಕಷ್ಟು ಕಷ್ಟದ ಕೆಲಸ, ಅದರಂತೆ ವಿದ್ಯೆ ಎನ್ನುವುದು ಹುಲಿಯ ಹಾಲು ಕುಡಿದಂತೆ ಎನ್ನುವುದನ್ನು ಅರಿಯಬೇಕು’ ಎಂದರು.

ಮುಖಂಡ ಹನಸೋಗೆ ನಾಗರಾಜು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ತಮ್ಮಣ, ವಕೀಲ ಎ.ಆರ್.ಕಾಂತರಾಜು, ಪರಿಶಿಷ್ಟ ಜಾತಿ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಯ್ಯ, ಅನ್ವೇಷಣಾ ಸಹಕಾರ ಸಂಘದ ಅಧ್ಯಕ್ಷ ಕಾಳಾಜಿ, ಸಂಘದ ಅಧ್ಯಕ್ಷ ಎಂ.ಜೆ.ರಾಜಶೇಖರ್ ಮಾತನಾಡಿದರು.

ಸಂಘದ ಪದಾಧಿಕಾರಿಗಳಾದ ಈ.ರಾಮಯ್ಯ, ಮಹಾಲಿಂಗಯ್ಯ, ಮಹದೇವ, ವೆಂಕಟೇಶ್, ಕೃಷ್ಣಯ್ಯ, ಅಮರನಾಥ್, ದೇವಯ್ಯ, ಟೌನ್ ಅಧ್ಯಕ್ಷ ವಿಜಯ್, ಅಶೋಕ, ಚಂದ್ರಪ್ಪ, ಸೀತರಾಮ, ಶ್ರೀನಿವಾಸ್, ಹೊನ್ನಪ್ಪ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-38-730116272

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.