ಚಿತ್ರದುರ್ಗ: ‘ಬದುಕಿನ ತಲ್ಲಣ ಹಾಗೂ ಪಲ್ಲಟಗಳ ಮಧ್ಯೆ ಬೌದ್ಧಿಕ ವಿಕಾಸ ಮತ್ತು ಜ್ಞಾನಾಭಿವೃದ್ಧಿಗೆ ಪುಸ್ತಕಗಳು ಬಹು ಅಗತ್ಯವಾಗಿವೆ. ಪುಸ್ತಕಗಳು ಸರಕಾಗದೇ ಸಂಸ್ಕೃತಿಯಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯದ ಅನುಷ್ಠಾನ ಅರ್ಥಪೂರ್ಣ ಹಾಗೂ ಸಾರ್ಥಕವಾದ ಕಾರ್ಯವಾಗಿದೆ’ ಎಂದು ಸಾಹಿತಿ ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಹೇಳಿದರು.

ನಗರದ ಎಚ್. ಲಿಂಗಪ್ಪನವರ ಗಂಗಾಂಭ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಾಧಿಕಾರದ ಗ್ರಂಥಾಲಯ ಮಾಹಿತಿ ಪತ್ರವನ್ನು ಜನಾರ್ಪಣೆಗೊಳಿಸಿ ಮಾತನಾಡಿದರು.

‘ಡಿಜಿಟಲ್–ಮೊಬೈಲ್ ಮಾಧ್ಯಮದ ಪ್ರಭಾವದಿಂದ ಕುಳಿತು ಓದುವ ಹವ್ಯಾಸ ವಿರಳವಾಗುತ್ತಿದೆ. ಕನ್ನಡ ನಾಡಿನ ಸಾಹಿತ್ಯ ಸಂಪತ್ತು ಹೇರಳವಾಗಿದ್ದು, ಅದನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳುವ ಮೂಲಕ ಲೇಖಕ ಹಾಗೂ ಕೃತಿಗೆ ಗೌರವ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಗ್ರಾಮ ಹಂತದಲ್ಲಿರುವ ಅರಿವು ಕೇಂದ್ರಗಳು ಈ ಮೂಲಕ ಪುನಶ್ಚೇತನಗೊಳ್ಳಬೇಕು’ ಎಂದರು.

‘ಕೃತಿಕಾರರ ಸಂಖ್ಯೆ ಜಾಸ್ತಿಯಾಗಿ ಓದುವವರ ಸಂಖ್ಯೆ ವಿರಳವಾಗಿದೆ. ಇಂದಿನ ಸಾಮಾನ್ಯ ಜ್ಞಾನಕ್ಕೆ ಪುಸ್ತಕಗಳು ಹಾಗೂ ಪತ್ರಿಕೆಗಳು ತುಂಬಾ ಸಹಕಾರಿಯಾಗಿವೆ. ಉತ್ತಮ ಚಿಂತನೆ, ಭಾವನೆ ಅಭಿವ್ಯಕ್ತಿಗಳ ಮೂಲಕ ಪರಿಣಾಮಕಾರಿಯಾದ ಸಾಹಿತ್ಯ ಹೊರಹೊಮ್ಮಿ, ಮುಂದಿನ ಪೀಳಿಗೆಯ ಬದುಕಿಗೆ ಬೆಳಕಾಗಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಎಂ. ನಾರಾಯಣಸ್ವಾಮಿ ಹೇಳಿದರು.

‘ಸಮಾಜದ ವಸ್ತುಸ್ಥಿತಿ ಅರಿತು ಅದರ ಸವಾಲುಗಳ ಪರಿಹಾರಕ್ಕೆ ಜ್ಞಾನಾರ್ಜನೆ ಮತ್ತು ಸಾಹಿತ್ಯ ಕೃಷಿ ಅತ್ಯಗತ್ಯವಾಗಿದೆ. ಬಹುಮುಖಿ ಚಿಂತನೆಗಳು ಕೃತಿಗಳ ಮೂಲಕ ವ್ಯಕ್ತವಾಗಿ ಎಲ್ಲರ ಬದುಕಿನಲ್ಲಿ ಅನುಷ್ಠಾನಗೊಂಡಾಗ ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ. ಬರವಣಿಗೆ ಕೆಲಸ ತುಂಬಾ ಕಠಿಣವಾಗಿದ್ದು, ಲೇಖಕನ ಶ್ರಮ ಸಾರ್ಥಕವಾಗಬೇಕಾದರೆ ಸಹೃದಯರ ಸಂಖ್ಯೆ ಅಧಿಕವಾಗಬೇಕು’ ಎಂದು ಸಾಹಿತಿ ಎಚ್. ಲಿಂಗಪ್ಪ ಸಲಹೆ ನೀಡಿದರು.

ಪುಸ್ತಕ ಪ್ರಾಧಿಕಾರದ ಜಾಗೃತಿ ಸಮಿತಿ ಜಿಲ್ಲಾ ಸಂಚಾಲಕ ನಿರಂಜನ ದೇವರಮನೆ, ಭಾಷಾ ಅನುವಾದಕ ಎಂ.ಜಿ. ರಂಗಸ್ವಾಮಿ, ಚಿಂತಕ ಪ್ರವೀಣ ಕುಮಾರ್, ಉಪನ್ಯಾಸಕ ಚೆನ್ನಬಸಪ್ಪ, ರಂಗಸ್ವಾಮಿ ಸಕ್ಕರ, ನಿರ್ಮಲಾ ಮರಡಿಹಳ್ಳಿ, ಗೀತಾ ಭರಮಸಾಗರ, ಗಂಜಿಗಟ್ಟೆ ಕೃಷ್ಣಮೂರ್ತಿ, ಕೆ.ಸಿ.ರುದ್ರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-44-1342823901

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.