ಚಿತ್ರದುರ್ಗ: ‘ಪ್ರತಿ ಕ್ಷೇತ್ರವನ್ನು ತಂತ್ರಜ್ಞಾನ ಆವರಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಕಲಿಕೆಯ ಮೂಲಕ ಹೊಸ ಜ್ಞಾನ ಸಂಪಾದಿಸಬೇಕು. ಆಗ ಮಾತ್ರ ವೃತ್ತಿ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಫಾ.ಕೆ.ಜೆ.ಜೋಮನ್ ತಿಳಿಸಿದರು.

ನಗರದ ಡಾನ್ ಬೋಸ್ಕೊ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ 2026ನೇ ಸಾಲಿನ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಪದವಿ ಎಂಬುದು ಅಂತಿಮ ಗುರಿಯಲ್ಲ. ಅದು ಹೊಸ ಅವಕಾಶಗಳ ಆರಂಭ. ಜ್ಞಾನವನ್ನು ಸಮಾಜದ ಪ್ರಗತಿಗೆ ಬಳಸುವ ಹೊಣೆಗಾರಿಕೆ ಯುವ ಪದವೀಧರರ ಮೇಲಿದೆ’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಜ್ಞಾನ, ಕೌಶಲ ಬೆಳೆಸಿಕೊಳ್ಳುವುದು ಅಗತ್ಯ. ಕೌಶಲವಿಲ್ಲದ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗುತ್ತಾರೆ. ಆ ಕಾರಣಕ್ಕೆ ಪದವಿಯ ಜೊತೆ ಕೌಶಲವಿದ್ದಾಗ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಸರ್ಕಾರಿ ಕೆಲಸಕ್ಕೆ ಕಾದು ಕುಳಿತುಕೊಳ್ಳುವ ಬದಲು ನೀವುಗಳೇ ಉದ್ಯಮಿಗಳಾಗಬೇಕು. ಅಂತಹ ಸಾಕಷ್ಟು ಅವಕಾಶ ಭಾರತದಲ್ಲಿದೆ’ ಎಂದರು.

‘ಪದವಿ ಪಡೆದ ಎಲ್ಲರಿಗೂ ಸರ್ಕಾರಿ ಉದ್ಯೋಗ ಸಿಗುವುದು ಕಷ್ಟ. ಸ್ವಾವಲಂಬಿಗಳಾಗಿ ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು. ಈ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಗಳಿಸಬೇಕು’ ಎಂದು ತಿಳಿಸಿದರು.

‘ಡಾನ್ ಬೋಸ್ಕೊ ಸಂಸ್ಥೆಯ ಮೌಲ್ಯಗಳು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಪ್ರತಿಫಲಿಸಬೇಕು. ವೃತ್ತಿಜೀವನದಲ್ಲಿ ನೈತಿಕತೆ, ಶಿಸ್ತು ಮತ್ತು ಸೇವಾಭಾವಕ್ಕೆ ಆದ್ಯತೆ ನೀಡಬೇಕು’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಫಾ.ಫೆಲಿಕ್ಸ್ ಸೆರಾವೋ ಹೇಳಿದರು.

‘ಇತ್ತೀಚಿನ ವರ್ಷಗಳಲ್ಲಿ ಪದವಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಸ್ನಾತಕೋತ್ತರ ಪದವಿ, ಸಂಶೋಧನಾ ಕಾರ್ಯದ ಕಡೆ ಗಮನಹರಿಸಬೇಕು. ಮೌಲ್ಯಯುತ ಶಿಕ್ಷಣ ಮಾತ್ರ ನಿಮ್ಮನ್ನು ಸದಾ ಕೈಹಿಡಿದು ನಡೆಸುತ್ತದೆ’ ಎಂದು ಪ್ರಾಂಶುಪಾಲ ಫಾ.ಸಿ.ಬೆನ್ನಿ ತಿಳಿಸಿದರು.

ಉಪಪ್ರಾಂಶುಪಾಲ ಫಾ.ಕ್ರಿಸ್ಟಿ ಜೋಸೆಫ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಎನ್.ಧನಕೋಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-44-313214071

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.