ಚಿತ್ರದುರ್ಗ: ‘ವಿದ್ಯಾರ್ಥಿ ಜೀವನ ಭವಿಷ್ಯ ರೂಪಿಸುವ ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ಶ್ರದ್ಧೆ, ಪರಿಶ್ರಮ ಹಾಗೂ ಗುರಿಯೊಂದಿಗೆ ಓದಿದರೆ ಯಶಸ್ಸು ನಿಮ್ಮದಾಗುತ್ತದೆ’ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಕೃಷ್ಣಪ್ಪ ತಿಳಿಸಿದರು.

ನಗರದ ಡಾನ್ ಬೋಸ್ಕೋ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಗಮನ ಹರಿಸಬೇಕು. ಪ್ರತಿಯೊಬ್ಬರೂ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹೊಂದಿ ಅದರತ್ತ ದೃಢ ಸಂಕಲ್ಪದೊಂದಿಗೆ ಸಾಗಬೇಕು’ ಎಂದರು.

‘ವಿದ್ಯಾರ್ಥಿ ಜೀವನದಲ್ಲಿ ಗಳಿಸುವ ಜ್ಞಾನ, ಶಿಸ್ತು ಹಾಗೂ ಸಂಸ್ಕಾರಗಳು ಮುಂದಿನ ಬದುಕಿನ ಯಶಸ್ಸಿಗೆ ಬುನಾದಿಯಾಗುತ್ತವೆ. ಈ ಹಂತದಲ್ಲಿ ಸಮಯ ಸದುಪಯೋಗ ಪಡಿಸಿಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ಶ್ರಮ ಮತ್ತು ಶ್ರದ್ಧೆಗೆ ಪರ್ಯಾಯ ಯಾವುದೂ ಇಲ್ಲ’ ಎಂದು ಹೇಳಿದರು.

‘ಡಾನ್ ಬೋಸ್ಕೋ ಸಂಸ್ಥೆ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣವನ್ನಷ್ಟೇ ನೀಡುವುದಿಲ್ಲ. ಜೀವನದಲ್ಲಿ ಉತ್ತಮ ವ್ಯಕ್ತಿತ್ವ ಹಾಗೂ ಮೌಲ್ಯ ಬೆಳೆಸುವ ಕೆಲಸವನ್ನೂ ಮಾಡುತ್ತಿದೆ. ಕಾಲೇಜಿನಲ್ಲಿ ಪಡೆದಿರುವ ಶಿಕ್ಷಣ ಮತ್ತು ಮೌಲ್ಯಗಳು ವಿದ್ಯಾರ್ಥಿಗಳ ಬದುಕಿನ ಪಯಣದಲ್ಲಿ ಸದಾ ಮಾರ್ಗದರ್ಶಕವಾಗಲಿವೆ’ ಎಂದು ಪ್ರಾಂಶುಪಾಲ ಫಾದರ್ ಸಿ. ಬೆನ್ನಿ ತಿಳಿಸಿದರು.

‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ಆತ್ಮವಿಶ್ವಾಸದಿಂದ ಜೀವನ ಕಟ್ಟಿಕೊಳ್ಳಲಿದ್ದಾರೆ. ಶಿಕ್ಷಣ ಮತ್ತು ಜೀವನ ಮೌಲ್ಯಗಳು ವ್ಯಕ್ತಿಯನ್ನು ಎಂದಿಗೂ ಕೈಬಿಡುವುದಿಲ್ಲ’ ಎಂದು ಹೇಳಿದರು.

ಸಂಸ್ಥೆಯ ಆಡಳಿತಾಧಿಕಾರಿ ಫಾದರ್ ಫೆಲೆಕ್ಸ್ ಸೆರಾವೋ, ಉಪ ಪ್ರಾಂಶುಪಾಲ ಫಾದರ್ ಕ್ರಿಸ್ಟಿ ಜೋಸೆಫ್, ನಿರ್ದೇಶಕ ಡಿ.ಎನ್. ಅಂಥೋನಿ ರಾಜು, ಉಪನ್ಯಾಸಕರಾದ ಎನ್. ಧನಕೋಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-44-76053438

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.