ಚಿತ್ರದುರ್ಗ: ‘ಇತಿಹಾಸದ ಪ್ರಜ್ಞೆ ಜನರಲ್ಲಿ ಇಲ್ಲವಾಗಿದೆ. ತಿಳಿಸಿ ಹೇಳುವ ಪ್ರಕ್ರಿಯೆ ಪ್ರತಿ ಮನೆ ಮನೆಯಿಂದ ಆರಂಭವಾಗಬೇಕು. ಪ್ರಾಚ್ಯಾವಶೇಷಗಳ ರಕ್ಷಣೆಗೆ ಹೆಚ್ಚಿನ ಗಮನ ಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಸರ್ಕಾರಿ ಕಲಾ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಎಸ್. ರೇವಣಸಿದ್ದಪ್ಪ ತಿಳಿಸಿದರು.

ನಗರದ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಮಾತನಾಡಿದರು.

‘ರೀಲ್ಸ್ ಹುಚ್ಚಿಗೆ ಮೂರ್ತಿಗಳನ್ನು ಹಾಳು ಮಾಡುವ ಕೆಲಸ ನಡೆಯುತ್ತಿದೆ. ಪ್ರಾಚ್ಯವಸ್ತು, ದೇವಾಲಯಗಳು ಪೂರ್ವಜರ ಬದುಕಿನ ಸಾಂಸ್ಕೃತಿಕ ಬೇರುಗಳು’ ಎಂದು ತಿಳಿಸಿದರು.

‘ವಸ್ತು ಸಂಗ್ರಹಾಲಯಗಳು ಶಿಕ್ಷಣ ಮತ್ತು ಸಂಶೋಧನೆಯ ಆಕರಗಳಾಗಿವೆ. ಪ್ರಾಥಮಿಕ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒದಗಿಸುತ್ತವೆ. ವಸ್ತು ಸಂಗ್ರಹಾಲಯಗಳು ಪೂರ್ವಜರ ಜ್ಞಾನ, ವಿಜ್ಞಾನ ಸಾಂಸ್ಕೃತಿಕ ಪರಂಪರೆಯನ್ನು ಜೀವಂತ ಸ್ಮಾರಕಗಳನ್ನಾಗಿ ಇಟ್ಟುಕೊಂಡಿವೆ. ಇವು ಚರಿತ್ರಕಾರನ ಅವಿಭಾಜ್ಯ ಅಂಗ’ ಎಂದರು.

‘ಲಕ್ಕುಂಡಿಯನ್ನು ಬಯಲು ಸಂಗ್ರಹಾಲಯವನ್ನಾಗಿ ಮಾಡಲು ಹೊರಟಿರುವುದು ಹೆಮ್ಮೆಯ ಸಂಗತಿ. ಪ್ರಾಚೀನ ಅವಶೇಷಗಳು ಎಲ್ಲಿಯಾದರೂ ಕಂಡು ಬಂದಲ್ಲಿ ನಿರ್ಲಕ್ಷ್ಯ ವಹಿಸದೆ ವಸ್ತು ಸಂಗ್ರಹಾಲಯಕ್ಕೆ ತಂದು ಕೊಡುವುದು ಎಲ್ಲರ ಜವಾಬ್ದಾರಿ. ನಾಯಕನಹಟ್ಟಿ ಸಮೀಪವಿರುವ ಹೊಸಗುಡ್ಡವನ್ನು ಕಾಶಿರಾಮೇಶ್ವರ ಎಂದು ಕರೆಯಲಾಗುತ್ತದೆ. ಕೋಟೆಯ ಕಲ್ಲುಗಳನ್ನು ಕಿತ್ತು ಸಣ್ಣ ಸಣ್ಣ ಗುಡಿಗಳನ್ನು ಕಟ್ಟಿ ವಿಕೃತಿ ಮೆರೆಯಲಾಗುತ್ತಿದೆ. ಪ್ರಾಚ್ಯ ಅವಶೇಷಗಳು ಹಾಳಾಗುತ್ತಿವೆ’ ಎಂದು ಬೇಸರಿಸಿದರು.

‘1977ರಲ್ಲಿ ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಘೋಷಿಸಲಾಯಿತು. ಇತಿಹಾಸದ ಕುರುಹುಗಳನ್ನು ತಿಳಿದುಕೊಳ್ಳುವುದು ಅಂತರರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನದ ಉದ್ದೇಶ. ಸ್ನಾತಕೋತ್ತರ ವಿದ್ಯಾರ್ಥಿಗಳು ಇತಿಹಾಸದ ಉಪಯೋಗ ಪಡೆದುಕೊಳ್ಳಬೇಕು’ ಎಂದು ಉಪನ್ಯಾಸಕ ಬಿ. ಸುರೇಶ್ ತಿಳಿಸಿದರು.

ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ. ಗೋಪಾಲಸ್ವಾಮಿ ನಾಯಕ, ಉಪನ್ಯಾಸಕ ಪ್ರೊ.ಬಿ.ಇ. ಜಗನ್ನಾಥ, ಸರ್ಕಾರಿ ವಸ್ತು ಸಂಗ್ರಹಾಲಯದ ಸಹಾಯಕ ನಿರ್ದೇಶಕ ಜಿ.ಪ್ರಹ್ಲಾದ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-44-2087504657

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.