ಚಿತ್ರದುರ್ಗ: ‘ಸಾಹಿತ್ಯ ಓದುವುದು ದೊಡ್ಡದಲ್ಲ. ಆದರೆ ಅದರ ಆಶಯವನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳುವುದು ಮುಖ್ಯ. ಆಗ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ’ ಎಂದು ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ತಿಳಿಸಿದರು.

ತಾಲ್ಲೂಕಿನ ಹಾಯ್ಕಲ್ ಗ್ರಾಮದಲ್ಲಿ ಕೆಎಂಎಸ್ ಪ್ರಥಮ ದರ್ಜೆ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದಲ್ಲಿ ಮಂಗಳವಾರ ‘ಕಲೆಯ ಒಲವು ಮತ್ತು ಬದ್ಧತೆ’ ಕುರಿತು ಉಪನ್ಯಾಸ ನೀಡಿದ ಅವರು, ‘ಕಲೆಯ ಅಧ್ಯಯನದ ಬಗ್ಗೆ ಆಸಕ್ತಿ ಇದ್ದಾಗ ಮಾತ್ರ ಸಾರ್ಥಕ ಕ್ಷಣಗಳು ನಮ್ಮದಾಗುತ್ತವೆ. ಸೇವೆ ಎಂಬುದು ಶ್ರೇಷ್ಠ ಮಾನವೀಯ ಮೌಲ್ಯವಾಗಿದೆ. ಸೇವಾ ಮನೋಭಾವದ ಕುರಿತು ಯುವಸಮೂಹದಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

‘ಸ್ವಾರ್ಥದ ಬದುಕು ಅಧೋಗತಿಗೆ ತಳ್ಳುತ್ತದೆ. ವಿದ್ಯಾರ್ಥಿಗಳು ಪರೋಪಕಾರಂ ಮಿದಂ ಶರೀರಂ ಹಾಗೂ ಶ್ರಮಯೇವ ಜಯತೆ ಎಂಬ ಘೋಷವಾಕ್ಯದೊಂದಿಗೆ ನಿಸ್ವಾರ್ಥತೆ ಅನುಸರಿಸಬೇಕು. ಕೆಲವರು ನೆಲದ ಸಂಸ್ಕೃತಿ ಮರೆತು ಐಷಾರಾಮಿ ಜೀವನಕ್ಕೆ ಮನಸೋಲುತ್ತಾರೆ. ಗ್ರಾಮೀಣ ಆಚಾರ ವಿಚಾರಗಳನ್ನು ಅರಿತಾಗ ಮಾತ್ರ ಆರೋಗ್ಯಕರ ಬದುಕು ನಡೆಸಬಹುದು’ ಎಂದು ತಿಳಿಸಿದರು.

‘ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಐಕ್ಯತಾ ಭಾವ ಮೂಡಿಸುತ್ತದೆ. ಮನಃಪೂರ್ವಕವಾಗಿ ಮಾಡಿದ ಕೆಲಸ ನೆಮ್ಮದಿ ನೀಡುತ್ತದೆ’ ಎಂದು ಸಾಹಿತಿ ಹುರುಳಿ ಎಂ.ಬಸವರಾಜ್ ಹೇಳಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕರೆಡ್ಡಿ, ಪ್ರಾಂಶುಪಾಲೆ ಕೆ.ಮಂಜುಳ, ಮುಖಂಡರಾದ ಪಾಲಯ್ಯ, ವೆಂಕಟೇಶರೆಡ್ಡಿ, ನಿ.ಶಿ.ಮಹಾಂತೇಶ್, ನವೀನ್ ರೆಡ್ಡಿ, ಪರಮೇಶ್, ಉಪನ್ಯಾಸಕರಾದ ಸೋಮಶೇಖರ್, ಶಶಿಧರ್, ಸಂತೋಷ್ ಕುಮಾರ್, ಗೋವಿಂದರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-44-1782539277

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.