ನಾಯಕನಹಟ್ಟಿ: ‘ಮಾದಿಗ ಸಮುದಾಯವು ಆರ್ಥಿಕವಾಗಿ ಪ್ರಗತಿ ಸಾಧಿಸದಿದ್ದರೆ ಸಾಮಾಜಿಕ ಸ್ಥಾನಮಾನ ಪಡೆಯುವುದು ಅಸಾಧ್ಯ’ ಎಂದು ಮಹಾಶರಣ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷ ಬಸವ ಹರಳಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹೋಬಳಿಯ ಮಾದಿಗ ಸಮುದಾಯದ ಮುಖಂಡರ ಜಾಗೃತಿ ಸಭೆಯಲ್ಲಿ ಬುಧವಾರ ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿರುವ ಮಾದಿಗ ಸಮುದಾಯದ ಪ್ರತಿಯೊಬ್ಬರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಆಗ ಪ್ರತಿಯೊಬ್ಬರಲ್ಲೂ ಪ್ರಜ್ಞಾವಂತಿಕೆ ಮೂಡುತ್ತದೆ. ಶಿಕ್ಷಣವು ಸಂಸ್ಕಾರ, ಸನ್ಮಾರ್ಗ, ಸಗ್ಧತಿ ಒದಗಿಸುತ್ತದೆ. ಇದು ನೊಂದ ಸಮುದಾಯಗಳನ್ನು ಸಶಕ್ತಗೊಳಿಸುವ ಪ್ರಬಲ ಅಸ್ತ್ರವಾಗಿದೆ. ಮಾದಿಗ ಸಮುದಾಯ ಹಲವು ಶತಮಾನಗಳಿಂದ ನೆಲೆ ಇಲ್ಲದೆ ನರಳಾಡಿದೆ. ಒಳಮೀಸಲಾತಿಯು ಸಮುದಾಯಕ್ಕೆ ಹೊಸ ದಿಕ್ಕು ತೋರಿಸುತ್ತದೆ’ ಎಂದರು.

ಪ.ಪಂ. ಸದಸ್ಯ ಎಂ.ಟಿ.ಮಂಜು ನಾಥ, ಮರಿಪಾಲಯ್ಯ, ಆರ್.ಬಸಪ್ಪ, ಟಿ.ರಮೇಶ್, ಶಂಕರಸ್ವಾಮಿ ಅವರು ಒಳಮೀಸಲಾತಿ ಅನುಷ್ಠಾನ ಹೋರಾಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಕೆ.ತಿಪ್ಪೇಸ್ವಾಮಿ, ಟಿ.ಶಿವದತ್ತ, ಮಧು, ಟಿ.ಬಸವರಾಜ, ಪ್ರಕಾಶ್, ಡಿ.ತಿಪ್ಪೇಸ್ವಾಮಿ, ಡಿ.ಚೌಡಪ್ಪ, ತಾರಕೇಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-44-1145473186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.