ಹಿರಿಯೂರು: ಚಿತ್ರದುರ್ಗ ಜಿಲ್ಲಾ ಯಾದವ ಗೊಲ್ಲ ಸಂಘಕ್ಕೆ ಮೇ 17 ರಂದು ಚುನಾವಣೆ ನಡೆಯಲಿದ್ದು, ಸಮಾಜದ ಅಭಿವೃದ್ಧಿ ಬಗ್ಗೆ ಕಾಳಜಿ, ಬದ್ಧತೆ ಇರುವವರನ್ನು ಆಯ್ಕೆ ಮಾಡಬೇಕು ಎಂದು ನಗರದ ವೇದಾವತಿ ಬಡಾವಣೆಯಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಗೊಲ್ಲ ಮುಖಂಡರ ಸಭೆಯಲ್ಲಿ ಮನವಿ ಮಾಡಲಾಯಿತು.

‘ಜಿಲ್ಲೆಯಲ್ಲಿನ ಗೊಲ್ಲ ಸಮಾಜದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಜನಾಂಗ ಅಭಿವೃದ್ಧಿ ಸಾಧಿಸಬೇಕಿದೆ. ಸಂಘದಲ್ಲಿ ಹೊಸ ಬದಲಾವಣೆಗಾಗಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಸಂಘದ ಸದಸ್ಯರ ಮೇಲಿದೆ’ ಎಂದು ಮುಖಂಡರು ಪ್ರತಿಪಾದಿಸಿದರು.

ಸಭೆಯಲ್ಲಿ ಮಾಜಿ ಶಾಸಕ ಎ.ವಿ. ಉಮಾಪತಿ, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವಣ್ಣ, ಯಾದವ ಗೊಲ್ಲ ಸಂಘದ ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷ ಆರ್.ರಂಗಸ್ವಾಮಿ, ಪುರಸಭೆ ಮಾಜಿ ಸದಸ್ಯ ಬಿ. ಕೆ. ಕರಿಯಪ್ಪ, ಮುಖಂಡರಾದ ಬಿ.ಕೆ. ಉಗ್ರಮೂರ್ತಿ, ಎ.ಜಿ. ತಿಮ್ಮಯ್ಯ, ಎಚ್. ತಿಪ್ಪೇಸ್ವಾಮಿ, ಸಿ. ಟಿ. ಕೃಷ್ಣಮೂರ್ತಿ, ರಾಮಕೃಷ್ಣಪ್ಪ, ವಕೀಲ ಬಸವರಾಜ, ಮುಂಗಸುವಳ್ಳಿ ಪ್ರಕಾಶ್, ಸಿ.ಶಿವಾನಂದ, ಕೂನಿಕೆರೆ ರಾಮಣ್ಣ, ಸಂಪತ್, ಧರ್ಮಪುರ ಶಿವಣ್ಣ, ಇಕ್ಕನೂರು ತಮ್ಮಣ್ಣ, ಪುಟ್ಟಣ್ಣ, ಬಂಗಾರಪ್ಪ, ಜಗದೀಶ್, ಪರಮೇಶ್, ಚಿತ್ರಜಿತ್ ಯಾದವ್, ನಾಗಪ್ಪ ಮಾಸ್ಟರ್, ಕದ್ರಪ್ಪ, ರಘು, ಕೃಷ್ಣಮೂರ್ತಿ, ಚಿತ್ತಯ್ಯ, ರಾಜು, ನಿರಂಜನ್, ತಿಪ್ಪೇಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-44-546937995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.